ಬೆಂಗಳೂರು ಕರಗದಲ್ಲಿ 21.50 ಲಕ್ಷ ವಂಚನೆ! ದೇವಾಲಯದ ಹಿಂದಿನ ಸಮಿತಿ ಅಧ್ಯಕ್ಷರ ವಿರುದ್ಧ ಎಫ್ಐಆರ್

Karaga
Published on

ಬೆಂಗಳೂರು: ಸುಪ್ರಸಿದ್ಧ ಬೆಂಗಳೂರು ಕರಗದ ಧರ್ಮರಾಯಸ್ವಾಮಿ ದೇವಸ್ಥಾನ ಸಮಿತಿಯಲ್ಲಿ 21.50 ಲಕ್ಷ ರೂ. ದುರುಪಯೋಗದ ಅನುಮಾನಗಳು ಹುಟ್ಟಿಕೊಂಡಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆ ಮೇಟ್ಟಿಲೇರಿದೆ.

ಧರ್ಮರಾಯಸ್ವಾಮಿ ದೇವಸ್ಥಾನ ಸಹಾಯಕ ಆಯುಕ್ತ, ಆಡಳಿತಾಧಿಕಾರಿ ವೆಂಕಟರಮಣ ಗುರುಪ್ರಸಾದ್, ಈ ಕುರಿತು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಈ ಹಿಂದಿನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ರಾಜಗೋಪಾಲ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಪ್ರಸ್ತುತ ಯಾವುದೇ ಸಮಿತಿ ರಚನೆಯಾಗಿಲ್ಲ. ಜಿಲ್ಲಾಧಿಕಾರಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಪ್ರತಿವರ್ಷ ಕರಗ ಶಕ್ತ್ಯೋತ್ಸವ ನಡೆಯಲಿದೆ. 2016ರಲ್ಲಿ ಬಿಬಿಎಂಪಿಯಿಂದ ಅನುಧಾನ ಬಿಡುಗಡೆಯಾಗಿತ್ತು. ಕರಗಕ್ಕೆ ಖರ್ಚು ಭರಿಸಿ ಉಳಿದಿದ 21.50 ಲಕ್ಷ ರೂ. ಅನ್ನು ನಿಶ್ಚಿತ ಠೇವಣಿ ಇಟ್ಟು ಬಾಂಡ್ 2018ರಲ್ಲಿ ಬಾಂಡ್ ಪಡೆಯಲಾಗಿದೆ. ಆದರೆ, ಸಮಿತಿ ಇಲ್ಲದ ಕಾರಣ ನಿಯಮಾನುಸಾರ ಠೇವಣಿ ಬಾಂಡ್‌ನ್ನು ಆಡಳಿತಾಧಿಕಾರಿಗೆ ಹಸ್ತಾಂತರ ಮಾಡಬೇಕು. ಈ ಕುರಿತು ರಾಜಗೋಪಾಲ್‌ಗೆ ಎರಡು ಬಾರಿ ಪತ್ರ ಬರೆದು ತಿಳಿಸಿದರೂ ಯಾವುದೇ ಉತ್ತರ ಬಂದಿಲ್ಲ. ಮೋಸ ಮಾಡುವ ಉದ್ದೇಶಕ್ಕೆ ನಿಶ್ಚಿತ ಠೇವಣಿ ಬಾಂಡ್‌ನ್ನು ನೀಡದೆ ದ್ರೋಹ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆಡಳಿತಾಧಿಕಾರಿ ಆರೋಪ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಕೈಗೊಂಡಿರವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net