ಮನಸೂರೆಗೊಂಡ ಚಾವುಂಡರಾಯ ನಾಟಕ

IMG_20231007_203850
ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ಶನಿವಾರ ರಾತ್ರಿ ಸಮಾಜಮುಖಿ ರಂಗಬಳಗದ ಕಲಾವಿದರಿಂದ ಚಾವುಂಡರಾಯ ನಾಟಕ ಪ್ರದರ್ಶನಗೊಂಡಿತು.
Published on

ಶ್ರವಣಬೆಳಗೊಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ದಿಗಂಬರ ಜೈನ ಮಠದ ಸಹಯೋಗದೊಂದಿಗೆ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ರಾತ್ರಿ ಪಟ್ಟಣದ ಚಾವುಂಡರಾಯ ಸಭಾಮಂಟಪದಲ್ಲಿ ಸಮಾಜಮುಖಿ ರಂಗಬಳಗದ ಕಲಾವಿದರಿಂದ ಚಾವುಂಡರಾಯ ನಾಟಕ ಪ್ರದರ್ಶನಗೊಂಡಿತು.

ಜಯರಾಮ್ ರಾಯಪುರ ಅವರು ರಚಿಸಿರುವ, ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಗಂಗರಸರ ಕಡೆಗಾಲದ ಚಿತ್ರಣವಿರುವ ಚಾವುಂಡರಾಯ ಎಂಬ ಐತಿಹಾಸಿಕ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು.

ಯುಗಳ ಮುನಿಗಳಾದ ಅಮೋಘ ಕೀರ್ತಿ ಮಹಾರಾಜರು, ಅಮರ ಕೀರ್ತಿ ಮಹಾರಾಜರು, ಅಭಿನವ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ನಾಟಕವನ್ನು ವೀಕ್ಷಿಸಿದರು. ನಂತರ ಎಲ್ಲ ಕಲಾವಿದರಿಗೆ ಶ್ರೀಮಠದ ವತಿಯಿಂದ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net