ಬಾಳೆಕುದ್ರು ಶ್ರೀಗಳ ಚಾತುರ್ಮಾಸ್ಯ

balekudru
ಬಾಳೆಕುದ್ರುಶ್ರೀ ಮಠದ ಶ್ರೀಗಳ ಚಾತುರ್ಮಾಸ್ಯ ನಿಮಿತ್ತ ಗುರುವಾರ ಶ್ರೀ ದುರ್ಗಾ ಹೋಮ ನೆರವೇರಿತು
Published on

ಕೋಟ: ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ನಗರ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದ್ದು, ಗುರುವಾರ ಶ್ರೀ ದುರ್ಗಾ ಹೋಮ ಸಂಪನ್ನಗೊಂಡಿತು.

ಕೃಷ್ಣ ಮೂರ್ತಿ ಕಡಬಗೆರೆ ಬೆಂಗಳೂರು ಮತ್ತು ರಮೇಶ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ವಿಪ್ರ ಸ್ನೇಹ ಸಭಾ ಟ್ರಸ್ಟ್ ಮತ್ತು ಶ್ರೀ ಮಾತಾ ಸಾಂಸ್ಕೃತಿಕ ಕೇಂದ್ರ, ಬನಶಂಕರಿ, ಬೆಂಗಳೂರು ಸದಸ್ಯರಿಂದ ಭಕ್ತಿ ಸಂಗೀತ, ಲಕ್ಷ್ಮೀ ನೃಸಿಂಹ ಸಹಸ್ರನಾಮ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ವಿಪ್ರ ಸ್ನೇಹ ಸಭಾ ಟ್ರಸ್ಟ್ ಅಧ್ಯಕ್ಷೆ, ಶ್ರೀ ಮಾತಾ ಸಾಂಸ್ಕೃತಿಕ ಕೇಂದ್ರದ ವಿದುಷಿ ವಿನೂತಾ ಎನ್.ಸ್ವಾಮಿ, ಶ್ರೀಮಠದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಾಮರ ಚಡಗ ಮತ್ತು ಶ್ರೀ ಮಠದ ವ್ಯವಸ್ಥಾಪಕ ಮಂಜುನಾಥ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net