ಚರಣ್‌ರಾಜ್‌ಗೆ ವಜ್ರದೇಹಿ ಪ್ರಶಸ್ತಿ

Published on

ನಂಜನಗೂಡು: ಉಡುಪಿಯ ಸ್ಪೋರ್ಟ್ಸ್ ಫೌಂಡೇಷನ್‌ನಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಉಡುಪಿಯ ಚರಣ್‌ರಾಜ್ ವಜ್ರದೇಹಿ ಪ್ರಶಸ್ತಿ, ಆರ್.ಧ್ರುವನಾರಾಯಣ ಸ್ಮಾರಕ ಕಪ್ ತಮ್ಮದಾಗಿಸಿಕೊಂಡರು. ಬೆಂಗಳೂರಿನ ರಾಮ್‌ಸೋಮಶೇಖರ್ ಎರಡನೇ, ಪ್ರತಾಪ್ ಕಲಕುಂಪ್ರಿಕಾ ಮೂರನೇ ಸ್ಥಾನ ಪಡೆದರು. ಕೊಲ್ಲಾಪುರದ ಮಂಜುನಾಥ್ ಬೆಸ್ಟ್ ಫೊಜರ್ ಪ್ರಶಸ್ತಿ ಪಡೆದರು.

ಬಹಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ, ಮುಖಂಡರಾದ ಕಳಲೆ ಕೇಶವಮೂರ್ತಿ,ಬೆಂಗಳೂರಿನ ರಾಮ್‌ಸೋಮಶೇಖರ್ ಪ್ರತಾಪ್ ಕಲಕುಂಪ್ರಿಕಾ ಸ್ಪೋರ್ಟ್ಸ್ ಫೌಂಡೇಷನ್ ಕಾರ್ಯದರ್ಶಿ ಬಿ.ಉಮಾ ಮಹೇಶ್, ಎಚ್.ಸಿ.ಬಸವರಾಜು, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಯು.ಎನ್.ಪದ್ಮನಾಭರಾವ್, ಎಸ್.ಕೃಷ್ಣಪ್ಪ, ಅಜಿತ್ ಸಿದ್ದನ್ನವರ್, ಉದ್ಯಮಿ ಎ.ಜೆ.ಬಾಲಸುಬ್ರಹ್ಮಣ್ಯ, ಡಾ.ಶ್ರೀಕಾಂತ್, ಮುಕುಂದ್ ಪಟೇಲ್, ಆನಂದರಾಮ, ಶ್ರೀಧರ್, ರವಿಕುಮಾರ್, ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net