

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ವಿಪ್ರ ಸಮಾಜ ಸನಾತನ ಸಂಸ್ಕೃತಿ ಉಳಿವಿಗೆ ಹಿಂದಿನ ಕಾಲದಿಂದಲೂ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಸಮಾಜದ ಸೇವೆ ಮಾಡುವ ಅವಕಾಶ ಮುಂದಿನ ಪೀಳಿಗೆಗೆ ಇದೆ ಎಂದು ಶಾಸಕ ಯಶ್‌ಪಾಲ್ ಎ.ಸುವರ್ಣ ಹೇಳಿದರು.
ಸೂರಾಲು ವಲಯ ವಿಪ್ರ ಟ್ರಸ್ಟ್ ಆಶ್ರಯದಲ್ಲಿ ಚೇರ್ಕಾಡಿ ಗ್ರಾಮ ಪೇತ್ರಿಯಲ್ಲಿ ನಿರ್ಮಾಣಗೊಂಡ ವಿಭುಶಂಕರ ಸಭಾಭವನ ಲೋಕಾರ್ಪಣೆ ಸಭಾಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹೈದರಾಬಾದ್ ಮಾತನಾಡಿ, ಸರಳ ಜೀವನ ಸಾಗಿಸುವ ಬ್ರಾಹ್ಮಣರು ಸರಳತೆಯಲ್ಲಿಯೇ ತೃಪ್ತಿಪಟ್ಟುಕೊಂಡವರು. ಇಂದು ಸಮಾಜದ ಸೂರಾಲು ವಲಯದ ಎಲ್ಲರೂ ಸೇರಿ ಸುಂದರ ಸಭಾಂಗಣ ನಿರ್ಮಿಸಿದ್ದು, ಮುಂದೆ ಕಾರ್ಯಕ್ರಮ ನಡೆಸುವುದರ ಮೂಲಕ ಸದಾ ಚಟುವಟಿಕೆಗಳು ನಡೆಯುವಂತಾಗಬೇಕು ಎಂದರು.
ವಿಪ್ರ ಟ್ರಸ್ಟ್ ಅಧ್ಯಕ್ಷ ಕೆ.ಮಂಜುನಾಥ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್‌ಪಾಲ್ ಎ.ಸುವರ್ಣ ಒಂದು ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು. ಮಾಜಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ಗ್ರಾಪಂ ಅಧ್ಯಕ್ಷ ನಾರಾಯಣ ನಾಯ್ಕ, ಹೊಸೂರು ಕರ್ಜೆ ಪ್ರಗತಿಪರ ಕೃಷಿಕ ಮಂಜುನಾಥ ಗೋಳಿ, ನಾರಾಯಣ ಹೆಬ್ಬಾರ್, ವೈದ್ಯೆ ಡಾ.ರಾಗಿಣಿ ಬೇಕೂರು ಉಪಸ್ಥಿತರಿದ್ದರು. ಸೂರಾಲು ವಲಯ ವಿಪ್ರ ಟ್ರಸ್ಟ್ ಸದಸ್ಯರು, ಶಿವಾನಿ ವಿಪ್ರ ಮಹಿಳಾ ಮಂಡಳಿ, ಸೂರಾಲು ವಲಯ ಬ್ರಾಹ್ಮಣ ಸಭಾದ ಸದಸ್ಯರು ಉಪಸ್ಥಿತರಿದ್ದರು. ಶಿವಾನಿ ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ಅಮಿತಾ ಕ್ರಮದಾರಿ ಸ್ವಾಗತಿಸಿದರು. ಟ್ರಸ್ಟ್ ಸಂಚಾಲಕ ನಾಗರಾಜ ಕೆದ್ಲಾಯ ಪ್ರಸ್ತಾವನೆಗೈದರು. ಪ್ರದೀಪ್ ಹೆಬ್ಬಾರ್ ನಂಚಾರು ದಾನಿಗಳ ಪಟ್ಟಿ ವಾಚಿಸಿದರು. ಕಮಲಾಕ್ಷ ಹೆಬ್ಬಾರ್ ನಿರೂಪಿಸಿ, ಕಮಲಾಕ್ಷಿ ಪ್ರಕಾಶ್ ಉಡುಪ ವಂದಿಸಿದರು.
ಪರಿಸರದ ಸುಮಾರು 10 ಕಿ.ಮೀ. ವ್ಯಾಪ್ತಿಯ ಎಲ್ಲ ಸಮುದಾಯದ ಜನತೆ ಅಗತ್ಯತೆ ಮನಗಂಡು ಪೇತ್ರಿಯಲ್ಲಿ ಮಂಜುನಾಥ ಹೆಬ್ಬಾರ್ ದಾನವಾಗಿ ನೀಡಿದ 10 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಸಭಾಭವನ ನಿರ್ಮಿಸಲಾಗಿದೆ. 8 ಸಾವಿರ ಚದರ ಅಡಿ ವಿಸ್ತೀರ್ಣದ ಎರಡು ಮಹಡಿ ಕಟ್ಟಡ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ, ವ್ಯವಸ್ಥಿತ ಮೂಲಸೌಕರ್ಯಗಳೊಂದಿಗೆ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಕೆ.ಮಂಜುನಾಥ ಹೆಬ್ಬಾರ್ ವಿಪ್ರ ಟ್ರಸ್ಟ್ ಅಧ್ಯಕ್ಷ ವಿಪ್ರ ಸಮಾಜ ಇಡೀ ಹಿಂದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಸಮಾಜ. ದೇಶಕ್ಕೆ, ಸಮಾಜಕ್ಕೆ ಒಳಿತಾಗಲಿ ಎಂದು ಹಾರೈಸುವ ಈ ಸಮಾಜದ ಸಭಾಭವನಗಳು ಕಡಿಮೆಯಿದ್ದು, ಎಲ್ಲಡೆ ಇಂತಹ ಸಭಾಭವನಗಳು ನಿರ್ಮಾಣಗೊಂಡು ಸಮಾಜದ ಚಟುವಟಿಕೆ ನಡೆಯುವಂತಾಗಬೇಕು. ರಘುಪತಿ ಭಟ್ ಮಾಜಿ ಶಾಸಕ