ಅವ್ಯವಸ್ಥೆಯ ಆಗರ ಸಾತನೂರು ರಸ್ತೆ!

1003652281
Published on

* ಮಾರ್ಗದ ಆರಂ‘ದಲ್ಲೇ ಅವ್ಯವಸ್ಥೆಯ ಆಗರ

* ವಾಹನಗಳ ಸಂಚಾರಕ್ಕೆ ಪರದಾಡುವ ಸ್ಥಿತಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದ ಸಾತನೂರು ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು, ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದವರು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆಂಬ ಆರೋಪವೂ ಕೇಳಿಬಂದಿದೆ.

ಹೌದು. ಬಾಗೇಪಲ್ಲಿಯಿಂದ ಹಲಗೂರು ರಾಜ್ಯ ಹೆದ್ದಾರಿ 94 ನಗರದಲ್ಲಿ ಹಾದುಹೋಗಿದ್ದು, ಸಾತನೂರು ರಸ್ತೆ ಎಂದೇ ಹೆಸರುವಾಸಿಯಾಗಿದೆ. ಈ ರಸ್ತೆ ಚನ್ನಪಟ್ಟಣ ನಗರದಿಂದ ಸಾತನೂರು, ಕನಕಪುರ, ಹಲಗೂರು ಸೇರಿ ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದಲ್ಲದೇ ಪ್ರಸಿದ್ಧ ಕಬ್ಬಾಳಮ್ಮ ದೇವಸ್ಥಾನ ಸೇರಿ ಹಲವು ಪ್ರವಾಸಿತಾಣಗಳಿಗೂ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಆದರೆ, ನಗರದಲ್ಲಿ ರಸ್ತೆ ಪ್ರಾರಂ‘ವಾಗುವ ಆರಂ‘ದಲ್ಲೇ ಅವ್ಯವಸ್ಥೆಯ ಆಗರವಾಗಿದೆ.

ನಗರದ ಸಾತನೂರು ಸರ್ಕಲ್ ಬಳಿಯಿಂದ ಅಂಬೇಡ್ಕರ್ ನಗರದವರೆಗೆ ರಸ್ತೆ ಅದ್ವಾನಗೊಂಡಿದೆ. ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವು ಅಪಘಾತಗಳು ಆಗಿರುವ ನಿದರ್ಶನಗಳಿವೆ. ಮಳೆ ಬಂದಾಗಲಂತೂ ಈ ರಸ್ತೆ ಅವ್ಯವಸ್ಥೆ ಹೇಳತೀರದಾಗಿದೆ. ರಸ್ತೆ ಯಾವುದು? ಗುಂಡಿ ಯಾವುದು ಎಂದು ಹುಡುಕುವ ಸ್ಥಿತಿ ಇದೆ. ವಾಹನ ಸವಾರರಿಗೆ ಕಷ್ಟವಾಗಬಾರದು ಎಂಬ ಕಾರಣಕ್ಕೆ ರಸ್ತೆ ಮಧ್ಯೆಯೇ ಬ್ಯಾರಿಕೇಡ್ ಹಾಕಿರುವುದು ಅವ್ಯವಸ್ಥೆಗೆ ನಿದರ್ಶನ ಎನ್ನಬಹುದು.

ವಿವಾದ ಮುಗಿದರೂ ಕಾಮಗಾರಿ ಇಲ್ಲ!!

ರಸ್ತೆ ಅಭಿವೃದ್ಧಿಗೆ ನಗರದ ಸಾತನೂರು ರಸ್ತೆಯಲ್ಲಿನ ಟಿಎಪಿಸಿಎಂಎಸ್ ವಾಣಿಜ್ಯ ಸಮುಚ್ಚಯದ ಮುಂ‘ಾಗವಿದ್ದ ಮುಸ್ಲಿಂ ಸಮುದಾಯದ ಖಬರಿಸ್ಥಾನ (ಸ್ಮಶಾನ) ಅಡ್ಡಿಯಾಗಿತ್ತು. ಈ ರಸ್ತೆ ಅಭಿವೃದ್ಧಿಗೆ ಸ್ಮಶಾನದ ಕೆಲ‘ಾಗ ಅವಶ್ಯಕವಾಗಿದ್ದ ಕಾರಣ, ಈ ಜಾಗವನ್ನು ತೆರವುಗೊಳಿಸಲು ಸಂಬಂಧಿಸಿದವರು ವಿರೋಧ ವ್ಯಕ್ತಪಡಿಸಿದ ಕಾರಣ ಹಲವು ವರ್ಷಗಳಿಂದ ರಾಜ್ಯ ಹೆದ್ದಾರಿಯನ್ನು ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ರಸ್ತೆ ಅಭಿವೃದ್ಧಿಗೆ ಹಾಗೂ ಸುಗಮಸಂಚಾರಕ್ಕೆ ತೊಡಕಾಗಿತ್ತು. ಆದರೆ, ಸ್ಮಶಾನ ವಿವಾದ 2022ರಲ್ಲಿಯೇ ಬಗೆಹರಿದಿದ್ದು, ಸ್ಮಶಾನದ ಕಾಂಪೌಂಡ್ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಸುಮಾರು 1 ಕೀಮಿ ದೂರ ವಿಸ್ತರಿಸದ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಸ್ತೆ ವಿಸ್ತರಣೆ ಆಗದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ರಸ್ತೆಯಲ್ಲಿ ಕಾವೇರಿ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್ ಹಾದುಹೋಗಿದ್ದು, ಪೈಪ್ ಒಡೆದಾಗ ರಸ್ತೆ ಅಗೆದು ಮತ್ತೆ ಸರಿಯಾಗಿ ಮುಚ್ಚದಿರುವುದೂ ಸಮಸ್ಯೆಗೆ ಕಾರಣವಾಗಿದೆ.

ಸಾತನೂರು ಸರ್ಕಲ್ ನಿಂದ 2.5 ಕೀಮಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಟೆಂಡರ ಪ್ರಕ್ರಿಯೆಯೂ ಮುಗಿದಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಕಾವೇರಿ ನೀರು ಸರಬರಾಜು ಪೈಪ್‌ಲೈನ್ ಈ ರಸ್ತೆಯಲ್ಲಿಯೇ ಹಾದುಹೋಗಿದ್ದು, ಅದರಿಂದಲೂ ಸಮಸ್ಯೆ ಉದ್ಭವವಾಗುತ್ತಿದೆ. ಈ ಬಗ್ಗೆ ಪತ್ರ ವ್ಯವಹಾರ ನಡೆಸಿದ್ದೇವೆ.ಶಿವಪ್ರಸಾದ್, ಎಇಇ ಲೋಕೋಪಯೋಗಿ ವಿಶೇಷ ಉಪ ವಿಭಾಗಸಾತನೂರು ಸರ್ಕಲ್ ದಿಂದ ಲಾಳಘಟ್ಟ ಸರ್ಕಲ್ ವರೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸುತ್ತಿರುವುದೇ ಇದಕ್ಕೆ ಕಾರಣ. ರಸ್ತೆಯಲ್ಲಿರುವ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇದರೊಂದಿಗೆ, ರಸ್ತೆಯನ್ನು ಅಂಗಡಿ ಮಳಿಗೆಯವರು ಆಕ್ರಮಿಸಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ.ಶರತ್ ಕುಮಾರ್, ಸಾರ್ವಜನಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net