ಅವ್ಯವಸ್ಥೆ ಖಂಡಿಸಿ ಬೃಹತ್​ ಪ್ರತಿಭಟನೆ

24blh4 abvp news
Published on

ಬೈಲಹೊಂಗಲ: ವಿದ್ಯಾರ್ಥಿಗಳಿಗೆ ವಸತಿ ನಿಯಗಳಲ್ಲಿ ಸಮಸ್ಯೆ ಹಾಗೂ ಅವ್ಯವಸ್ಥೆ ಖಂಡಿಸಿ ಪಟ್ಟಣದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ನೇತೃತ್ವದಲ್ಲಿ ಪಟ್ಟಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಬೃಹತ್​ ಪ್ರತಿಭಟನಾ ರ್ಯಾಲಿ ನಡೆಸಿ, ಹಿಂದುಳಿದ ವರ್ಗಗಳ ಇಲಾಖೆಗೆ ಗುರುವಾರ ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಅಪ್ಪಣ್ಣ ಹಡಪದ, ನಗರ ಸಂಪರ್ಕ ಪ್ರಮುಖ ಆಕಾಶ ಪೂಜೇರಿ, ವಿದ್ಯಾರ್ಥಿನಿ ಪ್ರಮುಖರಾದ ಕವಿತಾ ಮೂಗಲಾನಿ, ರೇಖಾ ನಯಾನಗರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಣಿರಾವೇಂದ್ರ ದೇಸಾಯಿ, ಸಿದ್ದೇಶ್ವರ ಶಿವಪೂಜಿಮಠ, ಸಾಗರಗೌಡ ದೊಡ್ಡಗೌಡ್ರ, ಚನ್ನು ಬೀಡಿ, ಸಿದ್ದು ಬೀಡಿ ಕಾಲೇಜ್​ ವಿದ್ಯಾರ್ಥಿಗಳು ಇದ್ದರು.

ಯರಗಟ್ಟಿ ವರದಿ: ವಿದ್ಯಾರ್ಥಿ ವೇತನ ವಿಳಂಬ ಹಾಗೂ ವಸತಿ ನಿಲಯದಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಯರಗಟ್ಟಿ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್​ ಎಂ.ವಿ.ಗುಂಡಪ್ಪಗೋಳಗೆ ಮನವಿ ಸಲ್ಲಿಸಿದರು. ಎಬಿವಿಪಿ ವಿಭಾಗ ಸಂಚಾಲಕ ನಿರಾವೇಂದ್ರ ದೇಸಾಯಿ, ನಗರ ಟಕದ ಅಧ್ಯ ಮಲ್ಲಿಕಾರ್ಜುನ ಹೊಸಮನಿ, ಕಾವೇರಿ ಉಳ್ಳಾಗಡ್ಡಿ, ಮಲ್ಲಮ್ಮ ಅಂಚಿ, ಕೀರ್ತಿ ಕಡಕೋಳ, ಅತಾ ಪಟ್ಟೇದ, ರೂಪಾ ಹಣಬರ, ತೇಜಸ್ವಿನಿ ಈಳಿಗೇರ, ದೇವರಾಜ ಯರಗಣವಿ, ನಾಗರಾಜ ಇಟಗೌಡರ, ಗಣೇಶ ಹಿರೇಮಠ, ಮೌನೇಶ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net