ಚಾನುಕೋಟಿ ಮಠ ಏಳಿಗೆಗೆ ಭಕ್ತರೇ ಕಾರಣ

2 kottur 01
ಕೊಟ್ಟೂರಿನ ತೇರುಬಯಲು ಬಸವೇಶ್ವರ ದೇವಸ್ಥಾನದಲ್ಲಿ ಡೋಣೂರು ಚಾನುಕೋಟಿ ಮಠದಿಂದ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಂಸಪ್ರೀಯ ನೃತ್ಯ ನಿಕೇತನದ ವಿದ್ಯಾರ್ಥಿನಿಯರ ಭರತನಾಟ್ಯ ಗಮನ ಸೆಳೆಯಿತು.
Published on

ಕೊಟ್ಟೂರು: ಸಾಹಿತ್ಯ, ಸಂಗೀತ, ಭರತನಾಟ್ಯ, ರಂಗಭೂಮಿ ಕಲೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಡೋಣೂರು ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೇರುಬಯಲು ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಡೋಣೂರು ಚಾನುಕೋಟಿ ಮಠ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಮರುಳಸಿದ್ಧೇಶ್ವರ ರಥೋತ್ಸವ ಅಂಗವಾಗಿ ಹಮ್ಮಿಕೊಂಡ 9 ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಡೋಣೂರು ಚಾನುಕೋಟಿ ಮಠ ಮೂರು ದಶಕಗಳಿಂದಲೂ ಬಸವೇಶ್ವರ ಜಯಂತಿ ಹಾಗೂ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳನ್ನು ನಿರಂತರವಾಗಿ ನಡೆಸುತ್ತಾ ಶ್ರೀಮಠದ ಭಕ್ತರ ಸಹಕಾರದಿಂದ ನಡೆಯುತ್ತಾ ಬಂದಿದೆ ಎಂದರು.

ಪಟ್ಟಣದ ಹಂಸ ಪ್ರಿಯ ನೃತ್ಯ ನಿಕೇತನದ ವಿದ್ಯಾರ್ಥಿನಿಯರ ಭರತನಾಟ್ಯ ನೋಡುಗರ ಗಮನ ಸೆಳೆಯಿತು. ಅಂಗವಿಕಲ ಆರ್.ಎಂ. ಸಿದ್ದೇಗೌಡ ನೀರಿನ ಮೇಲೆ ಹಾಕಿದ ರಂಗೋಲಿಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ. ನಂದಿತಾ ಜಾನಪದ ಗೀತೆ ಹಾಡಿದರು. ಶಿಕ್ಷಕ ರವಿ, ಪವಾಡ ರಹಸ್ಯ ಬಯಲು ನೋಡುಗರನ್ನು ನಿಬ್ಬೆರಗಾಗಿಸಿತು. ಕೆ.ಟಿ. ಸಿದ್ದರಾಮೇಶ, ಚಿಗಟೇರಿ ಕೊಟ್ರೇಶ ಇತರರಿದ್ದರು.


ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net