

ವಿಜಯವಾಣಿ ಸುದ್ದಿಜಾಲ ಕೋಟ
ಲೋಕಕಲ್ಯಾಣಾರ್ಥ ಹಮ್ಮಿಕೊಂಡ ವಿಷ್ಣುಸಹಸ್ರನಾಮ ಪಠಣ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.
ಪ್ರಾಕೃತಿಕ ಅಸಮತೋಲನ ನಿಯಂತ್ರಣಕ್ಕಾಗಿ ಕಾಸರಗೋಡಿನ ಕಣ್ಣೂರಿನಿಂದ ಬೈಂದೂರಿನ ಶಿರೂರು ಕಡಲ ಕಿನಾರೆ ತನಕ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇಗುಲ ಭಾನುವಾರ ಕೋಟ ಮಣೂರು ಪಡುಕರೆ ಸಮುದ್ರತಟದಲ್ಲಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮಲ್ಲಿ ಮಾತನಾಡಿದರು.
ಸಮುದ್ರತಟದಲ್ಲಿ ಕೇಶವ ಶಿಶುಮಂದಿರದ ಅಧ್ಯಕ್ಷ ಕೃಷ್ಣ ಹಂದೆ ಅರಸಿನ ಕುಂಕುಮ ಹಾಗೂ ಹಾಲು ಎರೆದು ಮಂತ್ರ ಪಠಿಸಿ ಸಮುದ್ರ ಪೂಜೆ ನೆರವೇರಿಸಿದರು. ಸ್ನೇಹಕೂಟ ಸಂಚಾಲಕಿ ಭಾರತಿ ವಿ.ಮಯ್ಯ, ಮಾರ್ಗದರ್ಶಕರಾದ ವಿಷ್ಣುಮೂರ್ತಿ ಮಯ್ಯ, ಕೋಟ ಪಂಚಾಯಿತಿ ಸದಸ್ಯರಾದ ಪ್ರದೀಪ್ ಸಾಲಿಯಾನ್, ಶೇಖರ್ ಗಿಳಿಯಾರು, ಪ್ರಮುಖರಾದ ಗಿರಿಜಾ ಪೂಜಾರಿ, ದಿನೇಶ್, ಅಜಿತ್ ಆಚಾರ್, ಲಲಿತಾ ಪೂಜಾರಿ, ಗೀತಾ ಪೂಜಾರಿ, ರತ್ನಾ ಪೂಜಾರಿ, ಪುಷ್ಪಾ ಹಂದಟ್ಟು, ಕಲಾವತಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ರವೀಂದ್ರ ಕೋಟ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣ ಸಂಘಟನೆ, ಸ್ನೇಹಕೂಟ ಮಣೂರು, ಕೇಶವ ಶಿಶು ಮಂದಿರ, ಹಂದಟ್ಟು ಮಹಿಳಾ ಬಳಗ ಸಹಕರಿಸಿದರು.
ಕಾರ್ಯಕ್ರಮ ನಡೆದ ಸ್ಥಳಗಳು
ಕೋಡಿ ತಲೆ, ಕೋಡಿ ಕನ್ಯಾಣ, ಪಾರಂಪಳ್ಳಿ ಪಡುಕರೆ, ಕೋಟತಟ್ಟು ಪಡುಕರೆ, ಮಣೂರು ಪಡುಕರೆ, ಮಣೂರು ಜಟ್ಟಿಗೇಶ್ವರ, ಕೊಮೆ, ಕೊರವಡಿ ಸಹಿತ ಜಿಲ್ಲೆಯ ಸಮುದ್ರ ತಟದಲ್ಲಿ ವಿವಿಧ ಸಂಘಟನೆಗಳು ಸಂಜೆ 4ರಿಂದ 6ಗವರೆಗೆ ವಿಷ್ಣು ಸಹಸ್ರನಾಮ ಪಠಿಸಿದರು. 250ಕ್ಕೂ ಅಧಿಕ ಮಂದಿ ಭಾಗಿಯಾದರು.