ಎರಡು ತಿಂಗಳಿನಲ್ಲಿ 20.52 ಕೋಟಿ ರೂ. ಬಿಡುಗಡೆ

garantee
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಗೃಹಲಕ್ಷ್ಮೀ ಯೋಜನೆಯಲ್ಲಿ ಡಿಸೆಂಬರ್‌ನ ಬಾಬ್ತು ಒಟ್ಟು 10,11,76,000 ರೂ, ಬಂದಿದ್ದು, ಎರಡು ತಿಂಗಳಲ್ಲಿ ಒಟ್ಟು 20,52,51,816 ರೂ. ಬಂದಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೆಸ್ಕಾಂಗೆ ಡಿಸೆಂಬರ್‌ನಲ್ಲಿ 1ಕೋಟಿ ರೂ. ಗೃಹಜ್ಯೋತಿ ಸಬ್ಸಿಡಿ ಬಂದಿದ್ದು, ಇದುವರೆಗೆ ಒಟ್ಟು 30 ಕೋಟಿ ರೂ. ಬಂದಿದೆ ಎಂದು ಮೆಸ್ಕಾಂ ಎಇಇ ವಿಜಯಕುಮಾರ್ ಶೆಟ್ಟಿ ಹೇಳಿದರು.

ಕೆಎಸ್‌ಆರ್‌ಟಿಸಿಯಲ್ಲಿ ಈವರೆಗೆ 1.1 ಕೋಟಿ ಮಹಿಳಾ ಪ್ರಯಾಣಿಕರಿಗೆ 38.3 ಕೋಟಿ ರೂ. ವಿನಾಯಿತಿ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಎಟಿಎಸ್ ಬಿ.ಟಿ.ನಾಯಕ್ ತಿಳಿಸಿದರು.

ತಾಪಂ ಇಒ ಡಾ.ರವಿ ಕುಮಾರ್ ಹುಕ್ಕೇರಿ, ಗ್ಯಾರಂಟಿ ಅನುಷ್ಠಾ ಸಮಿತಿ ಸದಸ್ಯರಾದ ವಸುಂಧರ ಹೆಗ್ಡೆ ಹೆಂಗವಳ್ಳಿ, ವಾಣಿ ಆರ್.ಶೆಟ್ಟಿ ಮೊಳಹಳ್ಳಿ, ನಾರಾಯಣ ಆಚಾರ್ ಕೋಣಿ, ಅಭಿಜಿತ್ ಪೂಜಾರಿ ಹೇರಿಕುದ್ರು, ಮಂಜು ಕೊಠಾರಿ ಕೆರಾಡಿ, ಗಣೇಶ್ ಕುಂದಾಪುರ, ಆಶಾ ಕರ್ವೆಲ್ಲೋ ಕುಂದಾಪುರ, ಸವಿತಾ ಪೂಜಾರಿ ಚಿತ್ತೂರು, ಜಹೀರ್ ಅಹಮದ್ ಗಂಗೊಳ್ಳಿ, ಚಂದ್ರ ಕಾಂಚನ್ ಜನ್ನಾಡಿ, ಅರುಣ್ ಹಕ್ಲಾಡಿ ಉಪಸ್ಥಿತರಿದ್ದರು.

7 ಸಾವಿರಕ್ಕೂ ಅಧಿಕ ಕಾರ್ಡ್ ಪರಿಶೀಲನೆ

ಅನ್ನಭಾಗ್ಯ ಯೋಜನೆಯಲ್ಲಿ ಸೆಪ್ಟೆಂಬರ್ ತನಕದ ಹಣ ಬಂದಿದೆ. 7,551 ಕಾರ್ಡ್‌ಗಳ ಪರಿಶೀಲಿಸಲಾಗಿದ್ದು, 415 ಕಾರ್ಡ್‌ಗಳು ನೈಜ ತೆರಿಗೆ ಪಾವತಿದಾರರೆಂದು ಗುರುತಿಸಲಾಗಿದೆ. ಪ್ರಸ್ತುತ ಕಾರ್ಡ್ ತಿದ್ದುಪಡಿಗೆ ಅವಕಾಶ ಇದ್ದು, ಹೆಸರು ಸೇರ್ಪಡೆ, ತೆಗೆಯುವುದು ಹಾಗೂ ವಿಳಾಸ ಬದಲಾವಣೆ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net