ತುಂಡಾದ ಬೃಹತ್ ಲಾರಿ ಚಾಲಕ ಪವಾಡ ರೀತಿಯಲ್ಲಿ ಪಾರು

IMG-20230915-WA0050.jpg
Published on

ಚನ್ನಪಟ್ಟಣ

ಬೃಹತ್ ಕಂಟೇನರ್ ವಾಹನವೊಂದು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಮಗುಚಿ ಬಿದ್ದು, ವಾಹನದ ಚಾಲಕನೊರ್ವ ವಾಹನದಲ್ಲೇ ತಗಲಾಕಿಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ತಾಲೂಕಿನ ಕುಂತೂರುದೊಡ್ಡಿ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸಿಮೆಂಟ್ ತುಂಬಿದ ಬೃಹತ್ ಸರಕು ಸಾಕಣಿಕೆ ವಾಹನದ ಟೈಯರ್ ಬ್ಲಾಸ್ಟ್ ಆಗಿ ಈ ಅವಘಡ ಸಂಭವಿಸಿದೆ. ಎಕ್ಸ್‌ಪ್ರೆಸ್‌ ಹೈವೇಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಿ ಬಂದಿರುವ ಈ ವಾಹನ ಸರ್ವಿಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.

ವಾಹನ ಎರಡು ತುಂಡಾಗಿದ್ದು, ಅರ್ಧ ಭಾಗ ಸರ್ವಿಸ್ ರಸ್ತೆಯಲ್ಲಿ ಮತ್ತೊಂದು ಭಾಗ ಈ ಜಾಗದ ಅಂಡರ್ ಪಾಸ್ ನಲ್ಲಿ ಬಿದ್ದಿದೆ. ಚಾಲಕ ಸುಬ್ಬಯ್ಯ ನಾಯ್ಡು ಸಿಲುಕಿಕೊಂಡಿದ್ದರು. ಆತನನ್ನು ಹೊರತೆಗೆಯಲು ಕಳೆದ ಒಂದು ಗಂಟೆಯಿಂದಲೂ ಪೊಲೀಸರು ಹಾಗೂ ಸಾರ್ವಜನಿಕರು ಹರಸಾಹಸ ನಡೆಸಿದರು.

ಚಾಲಕನ ಕಾಲಿಗೆ ತೀವ್ರ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net