ಚನ್ನವಷಭೇಂದ್ರಜ್ಜನ ಜಾತ್ರೆ ಇಂದಿನಿಂದ

25nsg1
Published on

ನೇಸರಗಿ: ಸ್ಥಳಿಯ ಸದ್ಗುರು ಚನ್ನವಷಭೇಂದ್ರ ದೇವರಕೊಂಡ ಅಜ್ಜನ 34ನೇ ಜಾತ್ರಾ ಮಹೋತ್ಸವ ಮಾ.26ರಿಂದ 31ರ ವರೆಗೆ ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ನೇಸರಗಿ&ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿಗಳ ನೇತತ್ವದಲ್ಲಿ ಜರುಗಲಿದೆ. 26ರಂದು ಬೆಳಗ್ಗೆ 6ಗಂಟೆಗೆ ಚನ್ನವಷಭೇಂದ್ರ ಸ್ವಾಮೀಜಿ ಮೂರ್ತಿಗೆ ರುದ್ರಾಭಿಷೇಕ, ಮಹಾಪೂಜೆ ನಡೆಯುವುದು. ಮಧ್ಯಾಹ್ನ 3ಗಂಟೆಗೆ ಸಕಲ ವಾದ್ಯಗಳೊಂದಿಗೆ ಮುತೆದೆಯರಿಂದ ಕುಂಭಮೇಳ, ಪಲ್ಲಕ್ಕಿ ಉತ್ಸವ, ಗ್ರಾಮದೇವಿಗೆ ಉಡಿ ತುಂಬುವುದು. ಸಂಜೆ5 ಗಂಟೆಗೆ ಕಳಸಾರೋಹಣ ಜರುಗುವುದು. ಪ್ರತಿದಿನ ರಾತ್ರಿ 9 ಗಂಟೆಗೆ ಪ್ರವಚನ ನಡೆಯುವುದು. 29ರಂದು ರಾತ್ರಿ 9 ಗಂಟೆಗೆ ಅವತಾರ ಸಿದ್ದಯೋಗಿ ಚನ್ನವಷಭೇಂದ್ರ ಮಹಾತ್ಮೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. 30ರಂದು ಸಂಜೆ 4 ಗಂಟೆಗೆ ಮಹಾರಥೋತ್ಸವ, 31 ರಂದು ಕಳಸಾರೋಹಣ ಜರುಗಲಿದೆ ಎಂದು ಚನ್ನವಷಭೇಂದ್ರ ಟ್ರಸ್ಟ್​ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net