ಮಾರುಕಟ್ಟೆಯಲ್ಲಿ ಲಾಟ್ ನಂ, ಹರಾಜು ದರ ಸೇರಿದಂತೆ ಎಲ್ಲವನ್ನು ಡಿಸ್‌ಪ್ಲೇ ಬೋರ್ಡ್ ತೋರಿಸಲಾಗುತ್ತದೆ. ಆದರೆ, ಈ ಬೋರ್ಡ್ ಗಳು ಕಳೆದ ಎರಡು ದಿನಗಳಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರೊಂದಿಗೆ, ಮಾರುಕಟ್ಟೆಯ ಪ್ಯಾನ್ ಗಳು ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದನ್ನು ಖಂಡಿಸಿ, ರೈತರು ಮಾರುಕಟ್ಟೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾರುಕಟ್ಟೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಪ್ರತಿಭಟನೆ ನಡೆಸಿದರು. ಇದಕ್ಕೆ ರೀಲರ್ಸ್ ಗಳು ಕೂಡ ಸಾಥ್ ನೀಡಿದರು.