

ವಿಜಯವಾಣಿ ಸುದ್ದಿಜಾಲ ಚನ್ನಪಟ್ಟಣ
ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ನಗರದ ಪೂರ್ವ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ಮೂಲದ ಚಂದ್ರ(40), ಅಪ್ಪು(22), ರಾಜು(55) ಬಂಧಿತರು. ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ಮಾರಾಟಕ್ಕೆ ತಂದಿದ್ದ ಸುಮಾರು 20 ಕೆ.ಜಿಯ 80 ಸಾವಿರ ರೂ. ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಸ್ಲಾಂಪುರ ಮೊಹಲ್ಲಾದ ಹಳೆಯ ಮನೆಯೊಂದರ ಮೇಲೆ ದಾಳಿಮಾಡಿದ ಪೂರ್ವಪೊಲೀಸ್ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ಮೂವರು ಶ್ರೀಗಂಧ ಮಾರಾಟಗಾರರನ್ನು ಬಂಧಿಸಿದ್ದು, ದಾಳಿಯ ವೇಳೆ ಸರಕನ್ನು ಕೊಳ್ಳಲು ಸಿದ್ಧವಾಗಿದ್ದ ಸೈಯ್ಯದ್ ಖಾಲಿದ್ ಎಂಬಾಂತ ಪರಾರಿಯಾಗಿದ್ದಾನೆ. ಕರ್ನಾಟಕ ಅರಣ್ಯ ಕಾಯಿದೆ ಮತ್ತು ಐಪಿಸಿ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.