ಪ್ರೇಮ ಸಾಯಿ ಹೆಸರಲ್ಲಿ ಚನ್ನಪಟ್ಟಣದಲ್ಲಿ ವಂಚನೆ

godman vvani
Published on

ರಾಮನಗರ: ನಾನು ಪ್ರೇಮ ಸಾಯಿ, ದೇವ ಮಾನವ ಕಷ್ಟಗಳನ್ನು ಪರಿಹಾರ ಮಾಡುತ್ತೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸಿದ ತಂಡದ ವಿರುದ್ಧ ಪ್ರಕರಣ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ತಂಡವೊಂದು ಪ್ರೇಮ ಸಾಯಿಬಾಬ ಎಂದು ಹೇಳಿಕೊಂಡು ಸಾರ್ವಜನಿಕರನ್ನು ವಂಚಿಸಿದ್ದು, ಮಹಿಳೆಯೊಬ್ಬರು ಈಗ ಪೊಲೀಸರಿಗೆ ದೂರು ನೀಡಿದ್ದಾರೆ.

ಏನಾಗಿತ್ತು?: ಚನ್ನಪಟ್ಟಣದ ಟೌನ್ ಎಂ.ಜಿ ರಸ್ತೆಯಲ್ಲಿರುವ ಯಶೋದಮ್ಮ ಎಂಬುವರ ಮನೆಯಲ್ಲಿ ಕಳೆದ 8 ತಿಂಗಳಿಂದ ಸಚಿನ್ ಅಕಾರಾಂ ಸರ್‌ಗರ್ ಎಂಬಾತ ತಾನು ಪ್ರೇಮ ಸಾಯಿ, ದೇವ ಮಾನ, ಜನರ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಪ್ರತಿದಿನ ಬೆಳಿಗ್ಗೆ ಸಂಜೆ ಪೂಜಾಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದು ಹಲವಾರು ಮಂದಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಚನ್ನಪಟ್ಟಣದ ಮಂಗಳವಾರ ಪೇಟೆಯ ಮರಳೊಲದ ಸಿಂಧು ಎನ್ನುವವರು ಪಾಲ್ಗೊಳ್ಳುತ್ತಿದ್ದರು .

ಒಂದು ದಿನ ಈ ವ್ಯಕ್ತಿ ನಾನು ಪ್ರೇಮಸಾಯಿ, ಯಶೋದಮ್ಮನ ಮನೆ ಚಿಕ್ಕದಾದ್ದರಿಂದ ಪ್ರತಿ ಗುರುವಾರ ಭಜನೆಗೆೆ ನಿಮ್ಮ ತೋಟದ ಮನೆಯಲ್ಲಿ ಅವಕಾಶ ಕೊಡುವಂತೆ ಕೋರಿದ್ದಾನೆ. ಇದಕ್ಕೆ ಮನೆಯಿಂದಲೂ ಅನುಮತಿ ದೊರೆತಿದ್ದು, ಸುಮಾರು ಮೂರು ತಿಂಗಳ ಕಾಲ ಪ್ರತಿ ಗುರುವಾರ ಭಜನೆ ನಡೆಯುತಿತ್ತು. ನಂತರ ಆತ ಚನ್ನಪಟ್ಟಣದ ಎಂಜಿ ರಸ್ತೆಯಲ್ಲಿರುವ ಯಶೋಧಮ್ಮ ಅವರ ಮನೆಗೆ ತೆರಳುತ್ತಿದ್ದ.

ಒಂದು ದಿನ ನಿಮ್ಮ ತೋಟದ ಮನೆ ಬಹಳ ವಿಶಾಲವಾಗಿದೆ, ಅದನ್ನು ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಸಮಿತಿ ಟ್ರಸ್ ್ಟ ಗೆ ದಾನವಾಗಿ ಕೊಡಿ ಎಂದು ಒತಾ ್ತಯಿಸಿದ್ದಾನೆ. ಈ ಟ್ರಸ್ಟ್ ನಲ್ಲಿ ವಿನಾಯಕ ರಾಜ್ ಸಾಯಿರಾಜ್, ಜಯಂತ್, ಯಶೋಧಮ್ಮ, ಉಮಾಶಂಕರ್, ಪ್ರಶಾಂತ್ ಎನ್ನುವರು ಇದ್ದು. ಮನೆ ದಾನ ಮಾಡಲು ಸಿಂಧು ಅವರ ಪತಿ ನಿರಾಕರಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೀಗೆ: ನಂತರ ಜು.13ರಂದು ಡಾ.ಸಾಯಿಕುಮಾರಿ, ಕೃಷ್ಣಯ್ಯ ಮತ್ತು ಗಿರೀಶ್ ವಿಜೇಂದ್ರ ಎನ್ನುವರು ನಡೆದ ಆಯೋಜಿಸಿದ್ದ ಗುರುಪೂರ್ಣಿಮಾ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಕೊಲಾ ್ಲಪುರದಿಂದಲೂ ಭಕ್ತರು ಬಂದಿದ್ದರು. ಸಚಿನ್ ಅಕಾರಾಂ ಸರ್‌ಗರ್‌ನನ್ನು ನೋಡುತ್ತಿದ್ದಂತೆ ಈತ ಪ್ರೇಮ ಸಾಯಿ ಅಲ್ಲ ಎನ್ನುವುದನ್ನು ಖಾತ್ರಿ ಪಡಿಸಿದ್ದಾರೆ. ಇದಾದ ನಂತರ ಅನುಮಾನಗೊಂಡ ಕೆಲ ಭಕ್ತರು ಕೊಲ್ಲಾಪುರಕ್ಕೆ ತೆರಳಿ ಈತನ ಪೂರ್ವಾಪರವನ್ನು ವಿಚಾರಣೆ ಮಾಡಿದಾಗ ಮೋಸ ಹೋಗಿರುವುದು ಹೊತ್ತಾಗಿದೆ.

ಆದರೆ, ಇಷ್ಟರಲ್ಲಾಗಲೇ ಕಷ್ಟಗಳನ್ನು ಪರಿಹರಿಸುತ್ತೇವೆಂದು ಹೇಳಿ ಹಲವಾರು ಜನರಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದಾನೆ. ಸ್ವತಃ ದೂರದಾರರಾದ ಸಿಂಧು 1.5 ಲಕ್ಷ ರೂ, ವೆಂಕಟೇಶ್, ಚನ್ನೇಗೌಡ ಎನ್ನವರು ತಲಾ 1 ಲಕ್ಷ ರೂ, ಎಚ್.ಜೆ ರಾಜೇಶ್ ಎನ್ನುವರು 2 ಲಕ್ಷ ರೂಗಳನ್ನು ಕೊಟ್ಟು ಮೋಸ ಹೋಗಿದ್ದಾರೆ. ಇದೀಗ ಸಚಿನ್ ಅಕಾರಾಂ ಸರ್‌ಗರ್, ವಿನಾಯಕ ರಾಜ್, ಸಾಯಿರಾಜ್, ಜಯಂತ್, ಯಶೋದಮ್ಮ, ಉಮಾಶಂಕರ್, ಪ್ರಶಾಂತ್ ಎನ್ನುವರ ವಿರುದ್ಧ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net