

ಚನ್ನಪಟ್ಟಣ:
ಪ್ರಯೋಗಾಲಯದ ಬೀಗ ಮುರಿದು ಸುಮಾರು 75 ಸಾವಿರ ಮೌಲ್ಯದ ಪ್ರಯೋಗಾಲಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಿಕಲ್ ಮಷೀನ್ ಲ್ಯಾಬ್‌ನ ಬೀಗ ಹಾಗೂ ಅಲ್ಮೆರಾ ಬೀಗವನ್ನು ಮುರಿದು ಅಲ್ಮೆರಾದಲ್ಲಿದ್ದ 30 ಸಾವಿರ ಮೌಲ್ಯದ ಎಲ್ಮಾಟ್ ಎ.ಸಿ. ಕಮುಕೇಟರ್, 18 ಸಾವಿರ ಮೌಲ್ಯದ ಎರಡು ೩ಫೇಸ್ ಎಚ್.ಪಿ. ಇಂಡಕ್ಷನ್ ಮೋಟರ್, ಎರಡು ೩ಫೇಸ್ ಡಾಲ್ ಸ್ಟಾರ್ಟರ್‍ಸ್, ಎರಡು 1ಎಚ್.ಪಿ. ಇಂಡಕ್ಷನ್ ಮೋಟರ್ ಹಾಗೂ ಫ್ಯಾನ್‌ಗಳನ್ನು ಕಳವು ಮಾಡಲಾಗಿದೆ.
ಹತ್ತು ದಿನದ ಅವಧಿಯಲ್ಲಿ ಎರಡು ಬಾರಿ ಕಾಲೇಜಿನ ಪ್ರಯೋಗಾಲದಯ ಬೀಗ ಮುರಿದು ಸುಮಾರು 75 ಸಾವಿರ ಮೌಲ್ಯದ ವಸ್ತುಗಳನ್ನು ಕಳುವ ಮಾಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಅರುಣಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಸಂಬಂಧ ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.