18ರಂದು ಚನ್ನಪಟ್ಟಣ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಂಭ್ರಮೋತ್ಸವ ಪ್ರಾಂಶುಪಾಲ ಡಾ. ವಿ. ವೆಂಕಟೇಶ್​ ಮಾಹಿತಿ

20230715_105345
Published on

ಚನ್ನಪಟ್ಟಣ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜು.18ರ ಮಂಗಳವಾರ ಸಾಂಸತಿಕ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ, ರೋವರ್ಸ್​ ಮತ್ತು ರೇಂರ್ಜಸ್​, ರೆಡ್​ಕ್ರಾಸ್​ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಂಗವಾಗಿ ಕಾಲೇಜು ಸಂಭ್ರಮೋತ್ಸವ 2022-23 ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಡಾ. ವಿ. ವೆಂಕಟೇಶ್​ ತಿಳಿಸಿದರು.

ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉನ್ನತ ಶಿಣ ಸಚಿವ ಡಾ. ಸುಧಾಕರ್​, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್​, ವಿಧಾನ ಪರಿಷತ್​ ಸದಸ್ಯರಾದ ಸಿ.ಪಿ.ಯೋಗೇಶ್ವರ್​, ಎಸ್​.ರವಿ, ಅ. ದೇವೇಗೌಡರ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಪ್ಯಾರಾ ಒಲಿಂಪಿಯನ್​ ಗಿರೀಶ್​, ಎನ್​ಸಿಸಿ. ಬೆಟಾಲಿಯನ್​ ಲೆಫ್ಟಿನೆಂಟ್​ ಕರ್ನಲ್​ ಪಿ.ಪಿ. ದಾಮೋದರನ್​ ಪಾಲ್ಗೊಳ್ಳದ್ದಾರೆ ಎಂದರು.

ಮಂಗಳವಾರ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ನಗರದ ಗಾಂಧಿಭವನದ ಬಳಿಯಿಂದ ಮೆರವಣಿಯಲ್ಲಿ ಅತಿಥಿಗಳನ್ನು ಕಾಲೇಜಿಗೆ ಕರೆತರಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲೆ ಉತ್ತಮ ಕಾಲೇಜು

ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷದ ಪದವಿಗೆ 860 ವಿದ್ಯಾರ್ಥಿಗಳು ದಾಖಲಾಗಿದ್ದು, ಒಟ್ಟು 3480 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ನ್ಯಾಕ್​ ಸಮಿತಿಯಿಂದ ಎಲ್ಲ ಸೌಲಭ್ಯಗಳು ಹಾಗೂ ಉತ್ತಮ ಫಲಿತಾಂಶ ಹೊಂದಿರುವ ಜಿಲ್ಲೆಯಲ್ಲಿನ ಅತ್ಯುತಮ ಕಾಲೇಜು ಎಂಬ ಹೆಗ್ಗಳಿಕೆಗೆ ನಮ್ಮ ಕಾಲೇಜು ಪಾತ್ರವಾಗಿದೆ. ಕಾಲೇಜಿನಲ್ಲಿ ಅತ್ಯುತ್ತಮ ಸೌಲಭ್ಯಗಳು ಇರುವುದಿಂದ ಚನ್ನಪಟ್ಟಣ ಮಾತ್ರವಲ್ಲದೇ ಬೇರೆ ಜಿಲ್ಲೆ ಹಾಗೂ ತಾಲೂಕುಗಳ ವಿದ್ಯಾರ್ಥಿಗಳು ಸಹ ವ್ಯಾಸಂಗ ಮಾಡಲು ಬರುತ್ತಿದ್ದಾರೆ ಎಂದು ವೆಂಕಟೇಶ್​ ಮಾಹಿತಿ ನೀಡಿದರು.

10 ಚಿನ್ನದ ಪದಕ

ಕಳೆದ ಸಾಲಿನಲ್ಲಿ ವಿಜ್ಣಾನ ವಿಭಾಗದಲ್ಲಿ 2 ಪದಕ ಸೇರಿ ಎರಡು ರ್ಯಾಂಕ್​, ಕಲಾ ವಿಭಾಗದಲ್ಲಿ 1 ರ್ಯಾಂಕ್​ ಸೇರಿ ಕಾಲೇಜಿನ ವಿದ್ಯಾರ್ಥಿಗಳೂ ಒಟ್ಟು 10 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇದಲ್ಲದೇ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್​ನಲ್ಲಿ ಸ್ಕೌಟ್ಸ್​ ಆಂಡ್​ ಗೈಡ್ಸ್​ ವಿಭಾಗದಲ್ಲಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಒಬ್ಬರು ಪ್ರಥಮ ಸ್ಥಾನ ಪಡೆದಿದ್ದಾರೆ. ಮರಗಾಲು ಕುಣಿತ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಲಭಿಸಿದೆ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಜನಪದ ಉತ್ಸವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮೂರು ಪ್ರಥಮ ಬಹುಮಾನ ಗಳಿಸಿದ್ದಾರೆ. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿ ದ್ವೀತಿಯ ಸ್ಥಾನ ಪಡೆದಿದದ್ದಾರೆ ಎಂದು ವೆಂಕಟೇಶ್​ ತಿಳಿಸಿದರು.

5 ಕೋಟಿ ವೆಚ್ಚದಲ್ಲಿ ಕಾಲೇಜಿಗೆ ಹೊಸದಾಗಿ 12 ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಕೊಠಡಿಗಳ ಕೊರತೆ ನೀಗಿದೆ. ಕಾಲೇಜಿನಲ್ಲಿ ಗಣಕೀಕೃತ ಲೈಬ್ರರಿ, ಉತ್ತಮ ಲ್ಯಾಬ್​ ಸೌಲಭ್ಯವಿದ್ದು, 38 ತರಗತಿಗಳಲ್ಲಿ ಐಸಿಟಿ ಕ್ಲಾಸ್​ ನಡೆಸಲಾಗುತ್ತಿದೆ. ದಾನಿಗಳ ಸಹಕಾರದಿಂದ ಡೆಸ್ಕ್​, ಕುರ್ಚಿಗಳನ್ನು ಪಡೆದಿದ್ದು, ಉತ್ತಮ ಸಭಾಂಗಣ ನಿರ್ಮಿಸಲಾಗಿದೆ ಎಂದು ವೆಂಕಟೇಶ್​ ಮಾಹಿತಿ ನೀಡಿದರು.

ಪ್ರಾಧ್ಯಾಪಕರಾದ ಡಾ. ಮುಜಾಯಿದ್​ ಖಾನ್​, ಡಾ.ಗುಂಡಪ್ಪ, ಮಂಜುನಾಥ್​ ಸೇರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net