ಸ್ಮಶಾನಕ್ಕಾಗಿ ತಾಲೂಕು ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ

unnamed
Published on
ಚನ್ನಪಟ್ಟಣ

ತಾಲೂಕಿನ ಹನುಮಾಪುರದದೊಡ್ಡಿ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶವವನ್ನು ನಗರದ ತಾಲೂಕು ಕಚೇರಿ ಮುಂಭಾಗವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ರಾಮದ ಕರಿಯಪ್ಪ(೬೦) ಎಂಬುವವರು ಸೋಮವಾರ ರಾತ್ರಿ ಮೃತಪಟ್ಟಿದ್ದರು. ಗ್ರಾಮದಲ್ಲಿರುವ ಸ್ಮಶಾನದ ಜಾಗವನ್ನು ಕೆಲವರು ಇದು ನಮ್ಮ ಖಾಸಗಿ ಜಮೀನು ಎಂದು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಇದು ಅಂತ್ಯಸಂಸ್ಕಾರಕ್ಕೆ ತೊಂದರೆ ಉಂಟು ಮಾಡುತ್ತಿದೆ. ಹಲವು ವರ್ಷಗಳಿಂದ ಗ್ರಾಮಸ್ಥರು ಸ್ಮಶಾನವಾಗಿ ಉಪಯೋಗಿಸುತ್ತಿದ್ದ ಜಾಗವನ್ನು ಖಾಸಗಿಯವರು ಸ್ವಾಧೀನ ಮಾಡಿಕೊಂಡಿರುವುದು ಸಮಸ್ಯೆಯ ಮೂಲವಾಗಿದೆ.

ಈ ಬಗ್ಗೆ ಈ ಹಿಂದೆ ಹಲವು ಪ್ರತಿಭಟನೆಗಳು ಸಹ ನಡೆದಿವೆ. ಕೆಲ ತಿಂಗಳ ಹಿಂದೆ ಇದೇ ರೀತಿಯಾದ ಸಮಸ್ಯೆ ಉದ್ಭವಿಸಿ, ಶವವನ್ನು ನಗರದ ತಾಲೂಕು ಕಚೇರಿಗೆ ತರುವಾಗ ಅಂದಿನ ತಹಸೀಲ್ದಾರ್ ಹಾಗೂ ಪೊಲೀಸರು ಮಾರ್ಗಮಧ್ಯೆಯೇ ಶವದ ವಾಹನವನ್ನು ತಡೆಹಿಡಿದು ಸಮಸ್ಯೆಯನ್ನು ಪರಿಹರಿಸಿದ್ದರು. ಇದೀಗ, ಶವಸಂಸ್ಕಾರ ಕ್ಕೆ ಮತ್ತೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net