ಚನ್ನಪಟ್ಟಣ ಕಾಂಗ್ರೆಸ್ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

WhatsApp Image 2023-07-12 at 11.12.09 AM
Published on

ಚನ್ನಪಟ್ಟಣ

ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ವಿರುದ್ಧದ ರಾಜಕೀಯ ಷಡ್ಯಂತ್ರವನ್ನು ಖಂಡಿಸಿ, ಚನ್ನಪಟ್ಟಣ ತಾಲೂಕು ಕಾಂಗ್ರೆಸ್ ವತಿಯಿಂದ ಬುಧವಾರ ನಗರದ ಗಾಂಧಿಭವನದ ಬಳಿ‌ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಗರದ ಗಾಂಧಿಭವನದ ಬಳಿ ಪ್ರತಿಭಟನೆ ಕುಳಿತಿರುವ ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರಸರ್ಕಾರದ ರಾಜಕೀಯ ದ್ವೇಷ ಹಾಗೂ ತಮ್ಮ ನಾಯಕನ ವಿರುದ್ಧದ ಷಡ್ಯಂತ್ರವನ್ನು ಮೌನ ಪ್ರತಿಭಟನೆಯ ಮೂಲಕ ಖಂಡಿಸಿದರು.

ಪ್ರತಿಭಟನಾಕಾರರ ಕೈಯಲ್ಲಿ‌ ಕುತಂತ್ರ, ವಾಮಚಾರಿ ಕೇಂದ್ರಸರ್ಕಾರಕ್ಕೆ ದಿಕ್ಕಾರ... ನಮ್ಮ ಹೆಜ್ಜೆ ಜನತಾ ನ್ಯಾಯಾಲಯದತ್ತ... ಇದು ಮಹಾತ್ಮಗಾಂಧಿ ಹುಟ್ಟಿದ ದೇಶ, ಹಿಟ್ಲರ್ ಸಂಸ್ಕೃತಿ ಉಳಿಯುವುದಿಲ್ಲ‌..., ರಾಹುಲ್ ಗಾಂಧಿಯವರ ಸತ್ಯದ ನಡಿಗೆಯಲ್ಲಿ ನಮ್ಮ ಹೆಜ್ಜೆ..., ಮೊಳಗಲಿ, ಮೊಳಗಲಿ ಸತ್ಯದ ಗರ್ಜನೆ ಮೊಳಗಲಿ. ಹೀಗೆ, ಸ್ಲೋಗನ್ ಗಳುಳ್ಳ ಭಿತ್ತಿಪತ್ರಗಳು ರಾರಾಜಿಸಿದವು. ಸಂಜೆವರೆಗೂ ಈ ಮೌನ ಪ್ರತಿಭಟನೆ ನಡೆಯಲಿದೆ.

ಪ್ರತಿಭಟನೆಯಲ್ಲಿ ತಾಲೂಕು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಸ್.ಆರ್.ಪ್ರಮೋದ್, ನಗರಾಧ್ಯಕ್ಷ ಸುನೀಲ್ ಕುಮಾರ್, ಪಕ್ಷದ ಮುಖಂಡರಾದ ಕೋಡಂಬಳ್ಳಿ ಶಿವಮಾದು, ಚಂದ್ರಸಾಗರ್, ಪಿ.ಡಿ.ರಾಜು, ಟಿ.ಪಿ.ಹನುಮಂತಯ್ಯ, ಮಂಗಳವಾರಪೇಟೆ ನಾಗೇಂದ್ರ, ಚೇತನ್ ಕೀಕರ್, ಅಕ್ಕೂರು ಶೇಖರ್, ಮಹಿಳಾ ಮುಖಂಡರಾದ ಕಾವೇರಮ್ಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net