ಚನ್ನಪಟ್ಟಣ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

JDS
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರಸಭೆ ಸ್ಥಾಯಿ ಸಮಿತಿ ಅಧ್ಯ ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭಗೊಂಡಿದೆ. ಈ ಸ್ಥಾನ ಅಲಂಕರಿಸಲು ಸ್ವಪಯರೇ ಮುಸುಕಿನ ಗುದ್ದಾಟ ಆರಂಭಿಸಿದ್ದಾರೆ.

ಹೌದು, ಅಧ್ಯ ಕೆ.ಮಂಜುನಾಥ್​ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಒಂದು ವರ್ಷಕ್ಕೆ ನೂತನ ಸ್ಥಾಯಿ ಸಮಿತಿ ರಚನೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಸಮಿತಿಗೆ ಅಧ್ಯರಾಗಲು ಜೆಡಿಎಸ್​ನಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಕೋರಂ ಹೊಂದಿರುವ ಜೆಡಿಎಸ್​ಗೆ ಈ ಸ್ಥಾನ ನಿರಾಯಾಸವಾಗಿ ದೊರಕಲಿದೆ. ಆದರೆ, ಈ ಸ್ಥಾನ ಅಲಂಕರಿಸಲು ಅವರಲ್ಲೇ ಪೈಪೋಟಿ ಆರಂಭಗೊಂಡಿದೆ.

ಈ ಹಿನ್ನೆಲೆಯಲ್ಲಿ ಯಾರು ಅಧ್ಯ ಸ್ಥಾನ ಅಲಂಕರಿಸುವರು ಎಂಬ ಕುತೂಹಲ ಮೂಡಿದೆ.

ಅಧ್ಯರಾಗಲು 3ನೇ ವಾರ್ಡ್​ ಸದಸ್ಯೆ ಲ್ಮಮ್ಮ, 7ನೇ ವಾರ್ಡ್​ ಸದಸ್ಯ ಸತೀಶ್​ ಬಾಬು ಹಾಗೂ 24ನೇ ವಾರ್ಡ್​ ಸದಸ್ಯ ಸಯ್ಯದ್​ ರಫೀಕ್​ ಆಕಾಂಗಳಾಗಿದ್ದಾರೆ. ಇವರ ಪೈಕಿ ಸತೀಶ್​ ಬಾಬು ಹಾಗೂ ಲ್ಮಮ್ಮ ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ತೆರೆಮರೆಯಲ್ಲಿ ಸಾಕಷ್ಟು ಲಾಬಿ ಆರಂಭಿಸಿದ್ದಾರೆ.

ಕುಮಾರಸ್ವಾಮಿ ಅಂಗಳದಲ್ಲಿ ಚೆಂಡು!

ಸದ್ಯ ಅಧ್ಯ ಸ್ಥಾನ ವಿಚಾರದ ಚೆಂಡು ಮಾಜಿ ಸಿಎಂ, ೇತ್ರದ ಶಾಸಕ ಕುಮಾರಸ್ವಾಮಿ ಅಂಗಳದಲ್ಲಿದೆ. ಸ್ವಪಯರ ಪೈಪೋಟಿ ಅರಿತ ಕುಮಾರಸ್ವಾಮಿ ಈಗಾಗಲೇ ಪದ ನಗರಸಭೆ ಸದಸ್ಯರ ಸಭೆ ನಡೆಸಿದ್ದಾರೆ. ಶನಿವಾರ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ. ಒಬ್ಬರನ್ನು ಹೊರತುಪಡಿಸಿ ಇತರ ಸದಸ್ಯರು ಭಾಗವಹಿಸಿದ್ದು, ಮೂವರು ಅಧ್ಯ ಸ್ಥಾನದ ಆಕಾಂೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿ, ಪ್ರತಿ ಸದಸ್ಯರ ವೈಯಕ್ತಿಕ ತೀರ್ಮಾನ ಆಲಿಸಿದ್ದಾರೆ ಎನ್ನಲಾಗಿದೆ. ಪದ ಹಿತಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಇರುವಂತೆ ಸೂಚಿಸಿದ್ದಾರೆ. ಪದ ತೀರ್ಮಾನದಂತೆ ಮುಂದುವರಿಯುವಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಸ್ಥಾಯಿ ಸಮಿತಿ!

31 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್​ 16, ಕಾಂಗ್ರೆಸ್​ 7, ಬಿಜೆಪಿ 7 ಹಾಗೂ ಓರ್ವ ಪೇತರ ಸದಸ್ಯರಿದ್ದಾರೆ. ಈ ಪೈಕಿ ಜೆಡಿಎಸ್​ ಬಹುಮತ ಪಡೆದಿದೆ. ಗರಿಷ್ಠ ಒಂಬತ್ತು ಸದಸ್ಯರಿರುವ ಈ ಸಮಿತಿಯ ಅಧಿಕಾರ ಅವಧಿ ಒಂದು ವರ್ಷದ ಬಳಿಕ ಅನೂರ್ಜಿತಗೊಳ್ಳಲಿದೆ. ಕಳೆದ ಒಂದು ವರ್ಷದ ಹಿಂದೆ ಕೆ.ಮಂಜುನಾಥ್​ ಸ್ಥಾಯಿ ಸಮಿತಿ ಅಧ್ಯರಾಗಿದ್ದರು. ಅವರ ಅವಧಿ ಮುಕ್ತಾಯಗೊಂಡಿದೆ. ಸ್ಥಾಯಿ ಸಮಿತಿ ಅಧ್ಯರಿಗೆ ಸಹಿ ಸೇರಿ ಹಲವು ಜವಾಬ್ದಾರಿಗಳಿದ್ದು, ಈ ಹಿನ್ನೆಲೆಯಲ್ಲಿ ಪೈಪೋಟಿ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net