

ಚನ್ನಮ್ಮನ ಕಿತ್ತೂರು: ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಕಲಗೌಡ ಪಾಟೀಲ ಅವರಿಗೆೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಂದ ಅಧ್ಯಕ್ಷ ಎಂ.ಎ್.ಜಕಾತಿ ಮಾತನಾಡಿ, ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿಪಡಿಸಬೇಕು. ಕಾರ್ಖಾನೆಗಳಿಂದ ತೂಕದಲ್ಲಿ ಮೋಸ ನಡೆಯುತ್ತಿದ್ದು, ಸರ್ಕಾರವೇ ಕಬ್ಬು ತೂಕ ಮಾಡಬೇಕು. ಜತೆಗೆ ಕಬ್ಬು ಪೂರೈಸಿದ 15 ದಿನದೊಳಗೆ ಬಿಲ್ ಪಾವತಿಸಬೇಕೆಂದು ಒತ್ತಾಯಿಸಿದರು.
ಅತಿವೃಷ್ಟಿಯಿಂದ ಸೋಯಾಬೀನ್ ಹಾನಿಯಾಗಿದ್ದು, ಕೂಡಲೇ ಬೆಳೆ ಪರಿಹಾರ ನೀಡಬೇಕು. ಬೆಳಗಾವಿಯಲ್ಲಿರುವ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಈಗಿದ್ದ ಸ್ಥಳದಲ್ಲೇ ಕಾರ್ಯನಿರ್ವಹಿಸಬೇಕು. ಪ್ರತಿ ತಾಲೂಕಿನಲ್ಲಿ ರೈತ ಭವನ ನಿರ್ಮಿಸಬೇಕು. ಅಲ್ಲದೆ, ಯೂರಿಯಾ ಗೊಬ್ಬರ ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ರೈತರಿಗೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ತಾಲೂಕಾಧ್ಯಕ್ಷ ಪ್ರವಿಣ ಸರದಾರ ಮಾತನಾಡಿದರು. ಮಹಿಳಾ ಟಕದ ಜಿಲ್ಲಾಧ್ಯೆ ನಾಗರತ್ನಾ ಪಾಟೀಲ, ಪ್ರಧಾನ ಕಾರ್ಯದರ್ಶಿ ಬೈಲಪ್ಪ ದಳವಾಯಿ, ಜಿ.ಎಸ್.ಹಿರೇಮಠ, ವಿಜಯಕುಮಾರ್ ಶಿಂಧೆ, ಕೀರಪ್ಪ ಜಾಂಗಟಿ, ಮಹೇಶ ಮಾದರ, ಕಲ್ಲಪ್ಪ ಬುಡರಕಟ್ಟಿ ಇತರರಿದ್ದರು.