

ಚನ್ನಮ್ಮನ ಕಿತ್ತೂರು: ತಾಲೂಕಿನ ಬೈಲೂರು ಗ್ರಾಮದಲ್ಲಿ ಮಂಗಳವಾರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂದ ಠರಾವು ಸಭೆಯಲ್ಲಿ ಗದ್ದಲ ಉಂಟಾಗಿ ಪೊಲೀಸರಿಂದ ಲು ಲಾಠಿಪ್ರಹಾರ ನಡೆದಿದೆ. ಬ್ಯಾಂಕ್ ನಿರೀಕ್ಷಕರ ಬದಲಾವಣೆ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರ ನಡುವೆ ಗಲಾಟೆ ಆರಂಭವಾದ ಸಂದರ್ಭದಲ್ಲಿ ಈ ಟನೆ ನಡೆದಿದೆ ಈ ಸಂದಲ್ಲಿ 6 ಜನ ಕಾಂಗ್ರೆಸ್ ಹಾಗೂ 6 ಜನ ಬಿಜೆಪಿ ಬೆಂಬಲಿತ ಸದಸ್ಯರು ಇದ್ದಾರೆ. ಹೀಗಾಗಿ, ಠರಾವು ಪಾಸಾಗಲು ಬ್ಯಾಂಕ್ ನಿರೀಕ್ಷಕರು ಅಗತ್ಯವಾಗಿದ್ದಾರೆ. ಒಂದೇ ದಿನ ಇಬ್ಬರು ನಿರೀಕ್ಷಕರನ್ನು ನೇಮಕ ಮಾಡಿ ಆದೇಶಿಸಿದ ಹಿನ್ನೆಲೆಯಲ್ಲಿ ಅಧಿಕೃತ ಆದೇಶವಿಲ್ಲದ ಅರುಣ ಪಾಟೀಲ ಎಂಬುವವರಿಗೆ ಸಭೆಯಿಂದ ಹೊರಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ಈ ನಡೆಗೆ ತೀವ್ರ ಆೇಪ ವ್ಯಕ್ತ ಪಡಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ಜತೆ ವಾಗ್ವಾದ ನಡೆಸಿದರು. ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಮತ ಚಲಾಯಿಸುವ ನಿಟ್ಟಿನಲ್ಲಿ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಭೆ ನಡೆದಿತ್ತು. ಎಸ್.ಕೆ.ಕೋಟಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ 8 ಮತಗಳೊಂದಿಗೆ ಬಹುಮತ ಸಾಧಿಸಿದರೆ, ಬಿಜೆಪಿ 5 ಮತಗಳನ್ನು ಪಡೆಯಿತು.