ಚನ್ನಗಿರಿ ತಾಲೂಕಲ್ಲಿ ಮಳೆಯಿಂದ 6 ಮನೆಗಳು ನೆಲಕ್ಕೆ

161
Published on

ಚನ್ನಗಿರಿ: ತಾಲೂಕಿನ ವಿವಿಧ ಕಡೆ ಸೋಮವಾರ ರಾತ್ರಿ ಸುರಿದ ಮಳೆಯಿಂದ 6 ಮನೆಗಳು ಬಿದ್ದಿದ್ದು, ಸುಮಾರು 3.25 ಲಕ್ಷ ರೂ. ನಷ್ಟವಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಪಿ.ಎಸ್.ಯರಿಸ್ವಾಮಿ ಮಂಗಳವಾರ ತಿಳಿಸಿದ್ದಾರೆ.

ತಾಲೂಕಿನ ಸೋಮಲಾಪುರ ತಾಂಡ, ಚಿಕ್ಕೂಡ, ಚಿಕ್ಕೂಲಿಕೆರೆ, ಹೊದಿಗೆರೆ, ದಾಗಿನಕಟ್ಟೆ, ಕೆರೆಬಿಳಚಿ ಗ್ರಾಮಗಳಲ್ಲಿ ತಲಾ ಒಂದು ಮನೆಗಳು ಬಿದ್ದಿದೆ. ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಉಬ್ರಾಣಿಯಲ್ಲಿ ಅಧಿಕ:
ಚನ್ನಗಿರಿ 26.4 ಮಿಲಿ ಮೀಟರ್, ದೇವರಹಳ್ಳಿ 24.6, ಕತ್ತಲಗೆರೆ 31, ತ್ಯಾವಣಗಿ 20, ಬಸವಾಪಟ್ಟಣ 38.4, ಜೋಳದಾಳು 32.2, ಸಂತೇಬೆನ್ನೂರು 14, ಉಬ್ರಾಣಿ 50.2, ಕೆರೆಬಿಳಚಿ 10.6 ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net