ಚನ್ನಗಿರಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ

93
Published on

ಚನ್ನಗಿರಿ: ಪಟ್ಟಣದ ಊರ ಬಾಗಿಲ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಣಪತಿ ಮೂರ್ತಿಯನ್ನು ಶನಿವಾರ ಪ್ರತಿಷ್ಠಾಪಿಸಲಾಯಿತು.

ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದವರು ಪ್ರತಿ ವರ್ಷದಂತೆ ಈ ಸಲವೂ 14 ನೇ ವರ್ಷದ 16 ದಿನಗಳ ಗಣೇಶ ಮೂರ್ತಿಯನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪನೆ ನೆರವೇರಿಸಿದರು.

ಈ ವೇಳೆ ವಿಹಿಂಪ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್, ಬಿಜೆಪಿ ಮುಖಂಡ ಎಚ್.ಎಸ್. ಶಿವಕುಮಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಹ ಕಾರ್ಯದರ್ಶಿ ಮಧುಸೂದನ್ ಇತರರಿದ್ದರು.

ಸಕಲ ಗೌರವಗಳೊಂದಿಗೆ ಸೆ. 22 ರಂದು ಪಟ್ಟಣದ ರಾಜ ಬೀದಿಗಳಲ್ಲಿ ಶೋಭಾಯಾತ್ರೆಯೊಂದಿಗೆ ಗಣಪತಿ ಹೊಂಡದಲ್ಲಿ ಸಂಜೆ ವಿಸರ್ಜನೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net