ಹಳ್ಳಕ್ಕೆ ಶೌಚಕ್ಕೆಂದು ಹೋದವ ಅಸ್ಥಿಪಂಜರವಾದ

maskiii
Published on

ರಾಯಚೂರು: ಜಿಲ್ಲೆಯ ಮಸ್ಕಿ ಹಳ್ಳದಲ್ಲಿ ಎರಡು ತಿಂಗಳ ಹಿಂದೆ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಶನಿವಾರ ಪತ್ತೆಯಾಗಿದೆ. ಹಳ್ಳದ ನಾಲೆಯ ಪೊದೆಯಲ್ಲಿ ಶವ ಪತ್ತೆಯಾಗಿದೆ.

ಸೆಪ್ಟೆಂಬರ್​ 11 ರಂದು ಚನ್ನಬಸಪ್ಪ ಹೆಸರಿನ ವ್ಯಕ್ತಿ ಹಳ್ಳದಲ್ಲಿ ಬಳಿ ಬಹಿರ್ದೆಸೆ ಮಾಡಲು ಹೋಗಿದ್ದ. ಆ ವೇಳೆ ಆತ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ವಿಚಾರ ತಿಳಿದು ಬಂದಾಕ್ಷಣ ಅಗ್ನಿಶಾಮಕ ದಳದಿಂದ ಶೋಧ ನಡೆಸಲಾಗಿತ್ತು. 15 ದಿನಗಳ ಕಾಲ ಹುಡುಕಾಟ ನಡೆಸಿದರೂ ಆತನ ದೇಹ ಪತ್ತೆಯಾಗಿರಲಿಲ್ಲ. ಇಂದು ಗ್ರಾಮದ ಯುವಕರು ಮೀದು ಹಿಡಿಯಲು ಹೋದಾಗ ಶವ ಪತ್ತೆಯಾಗಿದೆ.

ದೇಹವೆಲ್ಲ ಕೊಳೆತು ಮಣ್ಣಾಗಿದ್ದು, ಕೇವಲ ಅಸ್ಥಿಪಂಜರ ಮಾತ್ರವೇ ಉಳಿದುಕೊಂಡಿದೆ. ಅಲ್ಪಸ್ವಲ್ಪ ಬಟ್ಟೆಯೂ ಉಳಿದುಕೊಂಡಿದೆ. ಶವ ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net