ಅಧ್ಯಕ್ಷರಾಗಿ ಕೆ.ಎಸ್.ಚಂದ್ರು, ಉಪಾಧ್ಯಕ್ಷರಾಗಿ ಶೀಲಾ ಆಯ್ಕೆ

IMG_20240429_122310
Published on

ಕಂಪಲಾಪುರ: ಕಂಪಲಾಪುರ ಕೊಪ್ಪಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕೆ.ಎಸ್.ಚಂದ್ರು, ಉಪಾಧ್ಯಕ್ಷರಾಗಿ ಶೀಲಾ ಅವಿರೋಧ ಆಯ್ಕೆಯಾದರು.


ಕೆ.ಎಂ.ಲಕ್ಷ್ಮಣ್ ಹಾಗೂ ಪುಟ್ಟಮ್ಮ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಎರಡೂ ಸ್ಥಾನಗಳಿಗೆ ಇಬ್ಬರ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಜೆ.ಹಿತೇಂದ್ರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.


ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ರಮೇಶ್, ನಿರ್ದೇಶಕರಾದ ಗೋಪಾಲ್, ಲಕ್ಷ್ಮಣ್, ಗಿರೀಶ್, ಸಿದ್ದಪ್ಪ , ಸದಾನಂದ, ದಿನೇಶ್, ಪುಟ್ಟಮ್ಮ, ಗೀತಾ, ಸಿಇಒ ಲೋಕೇಶ್, ಹಾಲು ಪರೀಕ್ಷಕ ಮಂಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net