ಚಂದ್ರಶೇಖರ್​ ಆಜಾದ್​ ಜೀವನಾಧಾರಿತ ಫೋಟೋಶೂಟ್​! ವೈರಲ್​ ಆಯ್ತು ಸ್ವಾತಂತ್ರ್ಯ ಹೋರಾಟಗಾರನ ಲುಕ್​

harsh
Published on

ಬೆಂಗಳೂರು: ಇತ್ತೀಚೆಗೆ ದ ರಾ ಬೇಂದ್ರೆ ಜೀವನ ಮೌಲ್ಯಗಳನ್ನಾಧಾರಿತ ಪ್ರಿ ವೆಡ್ಡಿಂಗ್​ ಶೂಟ್​ ಒಂದರ ಫೋಟೋಗಳು ಸಕತ್​ ವೈರಲ್​ ಆಗಿದ್ದವು. ಆ ಫೋಟೋಗಳನ್ನು ಸೆರೆ ಹಿಡಿದಿದ್ದ ಫೋಟೋಗ್ರಾಫರ್​ ಕೈನಲ್ಲಿ ಇದೀಗ ಮತ್ತೊಂದು ವಿಶೇಷ ಫೋಟೋಶೂಟ್​ ನಡೆದಿದೆ. ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್​ ಆಜಾದ್​ ಜೀವನದ ಕಿರು ಪರಿಚಯ ಮಾಡಿಕೊಡುವ ಫೋಟೋಶೂಟ್​ ಅದಾಗಿದೆ.

ಯುವ ಆರ್ಟ್​ ಸ್ಟುಡಿಯೋಸ್​ನ ಹರ್ಷದ್​ ಉದಯ್ ಕಾಮತ್​ ಈ ಫೋಟೋ ಶೂಟ್​ ಮಾಡಿದವರು. ಆಜಾದ್​ ಅವರಂತೆಯೇ ಕಾಣುತ್ತಿರುವ ಮಾಡೆಲ್​ ಹೆಸರು ಶಶಿ ಹಿರೇಮಠ್​. ಧಾರವಾಡದ ಕರ್ನಾಟಕ ಕಾಲೇಜ್​ ಧಾರವಾಡ್​ (ಕೆಸಿಡಿ)ಯಲ್ಲಿ ಫೋಟೋ ಶೂಟ್​ ಮಾಡಲಾಗಿದೆ. ದ ರಾ ಬೇಂದ್ರ ಅವರ ಜೀವನ ಮೌಲ್ಯಾಧಾರಿತ ಪ್ರಿ ವೆಡ್ಡಿಂಗ್ ಫೋಟೋಶೂಟ್​ನ್ನು ಜನರು ಸ್ವೀಕರಿಸಿದ ರೀತಿ ನೋಡಿ ಇನ್ನಷ್ಟು ಸಮಾಜಮುಖಿ ಫೋಟೋಶೂಟ್​ ಮಾಡುವ ಹುಮ್ಮಸ್ಸು ಹುಟ್ಟಿದ್ದು, ಅದೇ ನಿಟ್ಟಿನಲ್ಲಿ ಈ ಶೂಟ್​ ಮಾಡಿದ್ದಾಗಿ ಹೇಳುತ್ತಾರೆ ಹರ್ಷದ್​.

ಫೋಟೋಶೂಟ್​ ಮಾಡುವುದಕ್ಕೂ ಮೊದಲು ಚಂದ್ರಶೇಖರ್​ ಆಜಾದ್​ ಜೀವನದ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ್ದೇವೆ. ಅವರ ಉಡುಗೆ, ಅವರ ನಿಲುವು ಹೀಗೆ ಸಣ್ಣ ಸಣ್ಣ ಸೂಕ್ಷ್ಮ ವಿಚಾರಗಳನ್ನೂ ಅರಿತುಕೊಂಡ ಮೇಲೆ ಫೋಟೋ ಶೂಟ್​ ಮಾಡಲಾಗಿದೆ. ಚಂದ್ರಶೇಖರ್​ ಆಜಾದ್​ರಂತಹ ವೀರರು ನಮ್ಮ ದೇಶದಲ್ಲಿ ಮಾತ್ರ ಹುಟ್ಟುವುದಕ್ಕೆ ಸಾಧ್ಯ. ಈಗಿನ ಸಮಾಜಕ್ಕೆ ಇಂತಹ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಅದಕ್ಕಾಗಿ ಇದು ನಮ್ಮ ಸಣ್ಣ ಕೊಡುಗೆ ಎನ್ನುತ್ತದೆ ಯುವ ಆರ್ಟ್​ ಸ್ಟುಡಿಯೋಸ್​ ತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net