

ಬೆಂಗಳೂರು: ಬಿಗ್ಬಾಸ್ ಸೀಸನ್ 6ರ ವಿನ್ನರ್ ಶಶಿ ನಿಮಗೆಲ್ಲರಿಗೂ ನೆನಪಿರಬೇಕು. ಉನ್ನತ ವಿದ್ಯಾಭ್ಯಾಸ ಪಡೆದು, ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಶಿ ಬಿಗ್ಬಾಸ್ ಮನೆಯಿಂದ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಇದೀಗ ಅದೇ ಮಾಡರ್ನ್ ರೈತ ಶಶಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಶಶಿ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಮಿನಿ ಕೂಪರ್ ಕಾರನ್ನು ಖರೀದಿಸಿರುವ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನನ್ನ ದೊಡ್ಡ ಕನಸೊಂದು ಇದೀಗ ಪಾರ್ಕಿಂಗ್ಗೆ ಬಂದಿದೆ. ನನ್ನ ಮೊದಲನೇ ಕಾರು ಓಮ್ನಿ. ಆದರೆ ಈಗ ಕೇವಲ ಮಿನಿ ಎಂದು ಬರೆದುಕೊಂಡಿದ್ದಾರೆ. ಕೆಂಪು ಕಲರ್ ಮಿನಿ ಕೂಪರ್ ಕಾರಿನ ಮುಂದೆ ನಿಂತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಅಂದ ಹಾಗೆ ಶಶಿ ಖರೀದಿಸಿರುವ ಈ ಕಾರಿನ ಬೆಲೆ 10 ಅಥವಾ 20 ಲಕ್ಷ ರೂಪಾಯಿಯೇನಲ್ಲ. ಈ ಕಾರಿನ ಆನ್ರೋಡ್ ಬೆಲೆ 43 ಲಕ್ಷ ರೂಪಾಯಿಯಷ್ಟಿದೆ. ಸಾಮಾನ್ಯ ಕೃಷಿಕ ಎನಿಸಿಕೊಂಡಿರುವ ಶಶಿಗೆ ಇಷ್ಟೊಂದು ದುಬಾರಿ ಕಾರನ್ನು ಖರೀದಿಸುವಷ್ಟು ಹಣ ಹೇಗೆ ಬಂತು ಎನ್ನುವುದರ ಬಗ್ಗೆಯೂ ಅನೇಕರು ಚರ್ಚೆ ಆರಂಭಿಸಿದ್ದಾರೆ. (ಏಜೆನ್ಸೀಸ್)