ದಿನಗೂಲಿ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ಗ್ಯಾಂಗ್​ ರೇಪ್​ ಮಾಡಿ ಕೊಂದ ಪಾಪಿಗಳು!

rape
Published on

ಅಹಮದಾಬಾದ್​: ದಿನಗೂಲಿ ಕೆಲಸ ಮಾಡಿಕೊಂಡು ಎರಡು ಮಕ್ಕಳನ್ನು ಸಾಕಿಕೊಂಡು, ಗಂಡನೊಂದಿಗೆ ಸಂತೋಷದಿಂದ ಜೀವನ ಕಳೆಯುತ್ತಿದ್ದ ಮಹಿಳೆಯೊಬ್ಬಳನ್ನು ಮೂವರು ಪಾಪಿಗಳು ಗ್ಯಾಂಗ್​ ರೇಪ್​ ಮಾಡಿ ಕೊಲೆ ಮಾಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

25 ವರ್ಷದ ಮಹಿಳೆ ಮತ್ತು ಆಕೆಯ ಗಂಡ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಏಪ್ರಿಲ್​ 17ರಂದು ಕೂಡ ಮಹಿಳೆ ಕೆಲಸಕ್ಕೆ ಹೊರಟಿದ್ದಾಳೆ. ಈ ಸಮಯದಲ್ಲಿ ದಾರಿ ಮಧ್ಯೆ ಅಡ್ಡಗಟ್ಟಿದ ಮೂರು ಕಾಮುಕರು ಆಕೆಯನ್ನು ಹತ್ತಿರದ ಪಾಳು ಬಂಗಲೆಯೊಂದಕ್ಕೆ ಎಳೆದೊಯ್ದಿದ್ದಾರೆ. ಅಲ್ಲಿ ಆಕೆಗೆ ಡ್ರಗ್ಸ್​ ಕೊಟ್ಟು, ಗ್ಯಾಂಗ್​ ರೇಪ್​ ಮಾಡಲಾಗಿದೆ. ಅದಾದ ನಂತರ ಆಕೆಯನ್ನು ಕೊಲೆ ಮಾಡಿ, ಹೆಣವನ್ನು ಹತ್ತಿರದಲ್ಲೇ ಎಸೆದ ಪಾಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಏಪ್ರಿಲ್​ 18ರಂದು ಮಹಿಳೆಯ ಮೃತದೇಹ ಪತ್ತೆಯಾಗಿದೆ. ಅದನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಆಕೆಯ ಮೇಲೆ ಗ್ಯಾಂಗ್​ ರೇಪ್​ ಆಗಿರುವುದು ದೃಢವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net