ಅಧ್ಯಕ್ಷರಾಗಿ ಚಂದ್ರಪ್ಪ ಆಯ್ಕೆ

IMG_20240725_142949
Published on

ನುಗ್ಗೇಹಳ್ಳಿ: ನುಗ್ಗೇಹಳ್ಳಿ ಹೋಬಳಿ ಎ.ಬೆಳಗುಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಿರೂಪಾಕ್ಷಿಪುರ ಗ್ರಾಮದ ಚಂದ್ರಪ್ಪ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.


ಪ್ರಭುಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಚಂದ್ರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ವಾಸಿಮ್ ಅವಿರೋಧ ಆಯ್ಕೆ ಪ್ರಕಟಿಸಿದರು.


ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಂ. ನಟರಾಜ್, ಮುಖಂಡರಾದ ತೋಟಿ ನಾಗರಾಜ್, ದೊರೆಸ್ವಾಮಿ, ಪುಟ್ಟಸ್ವಾಮಿ, ಜೈ ಲಿಂಗೇಗೌಡ, ಕೆಂಪೇಗೌಡ, ಅಶೋಕ್, ಮಹಾಲಿಂಗಪ್ಪ, ವಿರುಪಾಕ್ಷಿಪುರ ಪ್ರಕಾಶ್, ಜಾವೇದ್, ಸಂತೋಷ್, ತಿಮ್ಮಮ್ಮ, ರೇಣುಕಾಂಬಾ, ಮೂಡಲಗಿರಿ, ಭಾಗ್ಯಮ್ಮ, ಕಾರ್ಯನಿರ್ವಹಣಾಧಿಕಾರಿ ಸವಿತಾ, ರುದ್ರೇಶ್, ಕೆಂಪೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net