ಟಿ.ಜಿ.ಚಂದ್ರಪ್ಪ ಅವಿರೋಧ ಆಯ್ಕೆ

BANAVARA ELECTION
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಜಿ.ಚಂದ್ರಪ್ಪ ಅವಿರೋಧ ಆಯ್ಕೆಯಾದರು.


ಹಿಂದಿನ ಅಧ್ಯಕ್ಷ ರಮೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಟಿ.ಜಿ.ಚಂದ್ರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ದೇವರಾಜ್ ಅವಿರೋಧ ಆಯ್ಕೆ ಘೋಷಿಸಿದರು. ಬಳಿಕ ಮಾತನಾಡಿದ ಅವರು, ಸಂಘದ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಮುಂಬರುವ ದಿನಗಳಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.


ಸಂಘದ ನಿರ್ದೇಶಕರಾದ ಟಿ.ಆರ್.ಕೃಷ್ಣಮೂರ್ತಿ, ರಮೇಶ್, ಕೆಂಚಪ್ಪ, ರಾಜ ನಾಯಕ, ಧರ್ಮಪ್ಪ, ವೀಣಾ. ಜ್ಯೋತಿ ಈಶ್ವರಪ್ಪ, ಆರಿಫ್ ಜಾನ್ ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್.ಸುರೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net