

ನಾಪೋಕ್ಲು: ಪ್ರತಿಭಾ ಕಾರಂಜಿಯಲ್ಲಿ ಕುಂಜಿಲ ಆಕ್ಸ್‌ಫರ್ಡ್ ಶಾಲೆ ಮಕ್ಕಳು ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದುಕೊಂಡಿದ್ದಾರೆ.
1 ರಿಂದ 4 ನೇ ತರಗತಿ ವಿಭಾಗದ ಸ್ಪರ್ಧೆಗಳಲ್ಲಿ ಅಭಿನಯ ಗೀತೆಯಲ್ಲಿ ರಿಲಾ ಫಾತಿಮಾ ದ್ವಿತೀಯ, ಧಾರ್ಮಿಕ ಪಠಣದಲ್ಲಿ ಜಕೀಯ ದ್ವಿತೀಯ, ಕಥೆ ಹೇಳುವುದರಲ್ಲಿ ರನ ಫಾತಿಮಾ ದ್ವಿತೀಯ, ಛದ್ಮವೇಷದಲ್ಲಿ ಮಿನ್ಹ ಕದೀಜಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
5 ರಿಂದ 7ನೇ ತರಗತಿ ವಿಭಾಗದಲ್ಲಿ ಲಘು ಸಂಗೀತ, ಭಕ್ತಿ ಗೀತೆ ಸ್ಪರ್ಧೆಯಲ್ಲಿ ಅಫ್ನಾ ಪ್ರಥಮ, ಇಂಗ್ಲಿಷ್ ಕಂಠಪಾಠ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ರಿಂಶಾ ಫಾತಿಮಾ ಪ್ರಥಮ, ಕಥೆ ಹೇಳುವುದರಲ್ಲಿ ಜಝಾ ಫಾತಿಮಾ ಪ್ರಥಮ, ಹಿಂದಿ ಕಂಠಪಾಠದಲ್ಲಿ ನಿಧಾ ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಿಮಿಕ್ರಿಯಲ್ಲಿ ಫರ್ಹಾನ್ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ ರಿಂಶಾ ಫಾತಿಮಾ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ಪ್ರೌಢ ಶಾಲಾ ವಿಭಾಗದಲ್ಲಿ ಅಫ್ರೀದ್ ಜನಪದ ಗೀತೆಯಲ್ಲಿ ದ್ವಿತೀಯ, ಶಹದಿಯಾ ಭಾವಗೀತೆ ಸ್ಪರ್ಧ್ಯೆಲ್ಲಿ ದ್ವಿತೀಯ, ಚಿತ್ರ ಕಲೆಯಲ್ಲಿ ಇಜ್ಮಾ ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಶಬೀರ್ ಮತ್ತು ಮುನಜಿಲ್ ದ್ವಿತೀಯ, ರಂಗೋಲಿಯಲ್ಲಿ ಅನಸ್ ದ್ವಿತೀಯ, ಕನ್ನಡ ಭಾಷಣದಲ್ಲಿ ಹನ್ನತ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇಂಗ್ಲಿಷ್ ಭಾಷಣದಲ್ಲಿ ಹನ್ನತ್ ಪ್ರಥಮ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಹಂಜಾ ಪ್ರಥಮ, ಆಶುಭಾಷಣ ಸ್ಪರ್ಧೆಯಲ್ಲಿ ಅಫ್ರಾ ಫರ್ವೀನ್ ಪ್ರಥಮ, ಕವನ ವಚನದಲ್ಲಿ ಸಜ್ಞಾ ಪ್ರಥಮ, ಗಜಲ್‌ನಲ್ಲಿ ಶಫ್ನಾಜ್ ಪ್ರಥಮ, ಛದ್ಮವೇಷ ಸ್ಪರ್ಧೆಯಲ್ಲಿ ಅಮೀನ ಪ್ರಥಮ, ಕವ್ವಾಲಿಯಲ್ಲಿ ಅಫ್ರೀದ್ ಮತ್ತು ತಂಡ ಪ್ರಥಮ, ಜಾನಪದ ನೃತ್ಯದಲ್ಲಿ ಫೈಜ್ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.