ರೈತರಿಗೆ ಸುಸ್ಥಿರ ಕೃಷಿ ಪದ್ಧತಿಗಳ ಅರಿವು

ಪೌಷ್ಟಿಕ ಕೈತೋಟದ ಹಸಿರುಧಾಮ ಉದ್ಘಾಟನೆ
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ಥಾಪಿಸಿರುವ ಪೌಷ್ಟಿಕ ಕೈತೋಟ ಹಸಿರು ಧಾಮ ಮತ್ತು ಬೆಳೆ ವಸ್ತು ಸಂಗ್ರಹಾಲಯವನ್ನು ರೈತರು ಉದ್ಘಾಟನೆ ಮಾಡಿದರು.
Published on: 

ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ಥಾಪಿಸಿರುವ ಪೌಷ್ಟಿಕ ಕೈತೋಟ ಹಸಿರುಧಾಮ ಮತ್ತು ಬೆಳೆ ವಸ್ತು ಸಂಗ್ರಹಾಲಯವನ್ನು ರೈತರು ಉದ್ಘಾಟಿಸಿದರು.

ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಸ್ಥಾಪಿಸಿರುವ ಹಸಿರುಧಾಮದ ಬೆಳೆ ವಸ್ತುಸಂಗ್ರಹಾಲಯದಲ್ಲಿ ರೈತರಿಗೆ ವಿವಿಧ ಬೆಳೆಗಳು ಹಾಗೂ ಅವುಗಳ ತಳಿಗಳ ಪರಿಚಯವಾಗುವಂತೆ ಏಕದಳ ಧಾನ್ಯ, ದ್ವಿದಳ ಧಾನ್ಯ, ಸಿರಿಧಾನ್ಯ, ಎಣ್ಣೆಕಾಳು ಮತ್ತು ಮೇವಿನ ಬೆಳೆಗಳನ್ನು ಬೆಳೆಸಲಾಗಿದೆ. ವಿಶ್ವವಿದ್ಯಾಯದ ತಳಿಗಳು ಹಾಗೂ ಸ್ಥಳೀಯ ತಳಿಗಳ ನಡುವಿನ ವ್ಯತ್ಯಾಸವನ್ನು ರೈತರು ನೇರವಾಗಿ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಯಿತು. ಪರ್ಯಾಯ ಬೆಳೆ ಯೋಜನೆ ಅಂಗವಾಗಿ ವಿವಿಧ ಬಗೆಯ ಸಿರಿಧಾನ್ಯಗಳನ್ನು ಬೆಳೆಸಲಾಗಿದ್ದು, ಇವುಗಳ ವೈವಿಧ್ಯತೆ ಮತ್ತು ಮಹತ್ವವನ್ನು ರೈತರಿಗೆ ಪರಿಚಯಿಸಲಾಯಿತು.

ಪ್ರಮುಖವಾಗಿ ಅವರೆ ಎ-5 ಮತ್ತು ಸ್ಥಳೀಯ ತಳಿ, ಹುರಳಿ ಎ-9, ಅಲಸಂದೆ, ತೊಗರಿ-3 ಹಾಗೂ ಮೆಕ್ಕೆಜೋಳ -14-138 ತಳಿಗಳನ್ನು ಪ್ರದರ್ಶಿಸಲಾಯಿತು.

ಬೆಳೆ ವಸ್ತು ಸಂಗ್ರಹಾಲಯದಲ್ಲಿ ಎರೆಹುಳು ಗೊಬ್ಬರ, ಅಜೋಲಾ, ಒಣಮೇವು ತಯಾರಿಕೆ, ಸೈಲೇಜ್ ಹಾಗೂ ದ್ರವ ಸಾವಯವ ಗೊಬ್ಬರಗಳ ಪ್ರಾತ್ಯಕ್ಷತೆ ನಡೆಸಲಾಯಿತು. ಕೃಷಿ ತ್ಯಾಜ್ಯದ ಸದ್ಬಳಕೆ, ಮೇವಿನ ಸಂರಕ್ಷಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಪ್ರಾಯೋಗಿಕ ಜ್ಞಾನ ನೀಡಲಾಯಿತು.

ವಿಜ್ಞಾನಿಗಳಾದ ಡಾ. ಜಿ.ನಾಗೇಶ, ಡಾ. ದೇವರಾಜು, ಡಾ. ಪವಿತ್ರಾ ಬಿ.ಎಸ್.ಡಾ.ಶರಣಪ್ಪ, ಡಾ. ವಾಘ್ಮಾರೆ ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net