ಕೆರೆಗಳ ಸ್ವಚ್ಛತೆಗೆ ಸಿಗಲಿ ಆದ್ಯತೆ

ಎಂ.ಎಸ್.ತನ್ಮಯಿ ಆಶಯ
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಮ್ಮ ಊರು ನಮ್ಮ ಕೆರೆ ಯೋಜನೆಯ ನಾಮಫಲಕವನ್ನು ಎಂ.ಎಸ್.ತನ್ಮಯಿ ಅನಾವರಣಗೊಳಿಸಿದರು. ಡಾ.ಯೋಗೇಶ್, ಮಹೇಶ್, ನಾಗೇಶ್, ದಿನೇಶ್ ಇದ್ದರು.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಮ್ಮ ಊರು ನಮ್ಮ ಕೆರೆ ಯೋಜನೆಯ ನಾಮಫಲಕವನ್ನು ಎಂ.ಎಸ್.ತನ್ಮಯಿ ಅನಾವರಣಗೊಳಿಸಿದರು. ಡಾ.ಯೋಗೇಶ್, ಮಹೇಶ್, ನಾಗೇಶ್, ದಿನೇಶ್ ಇದ್ದರು.
Published on: 

ಗುಂಡ್ಲುಪೇಟೆ: ಪ್ರತಿ ಗ್ರಾಮದವರು ತಮ್ಮ ಊರಿನ ಕೆರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಹಸೀಲ್ದಾರ್ ಎಂ.ಎಸ್.ತನ್ಮಯಿ ಹೇಳಿದರು.

ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಾಮಫಲಕ ಅನಾವರಣ ಮಾಡಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಕೆರೆಗಳಿಗೆ ಪುನಶ್ಚೇತನ ನೀಡಲಾಗುತ್ತಿದ್ದು, ನಮ್ಮೂರ ನಮ್ಮ ಕೆರೆ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮವಾಗಿದೆ. ಇದರ ಸದುಪಯೋಗ ಪಡೆದು ಕೆರೆಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆರೆಗಳ ನಿರ್ವಹಣೆ ಮತ್ತು ಕೆರೆಗಳಿಂದಾಗುವ ಉಪಯೋಗಗಳ ಬಗ್ಗೆ ಕೆರೆ ಸಮಿತಿ ಅಧ್ಯಕ್ಷ ಮಹೇಶ್ ಮಾಹಿತಿ ನೀಡಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ಡಾ.ಯೋಗೇಶ್, ಜನಜಾಗೃತಿ ವೇದಿಕೆ ಸದಸ್ಯರಾದ ನಾಗೇಶ್, ಮಹೇಂದ್ರ, ಯೋಜನಾಧಿಕಾರಿ ಚಂದ್ರಶೇಖರ್, ಜಿಲ್ಲಾ ನಿರ್ದೇಶಕ ದಿನೇಶ್, ಕೃಷಿ ಮೇಲ್ವಿಚಾರಕ ಮಾದೇಪ್ರಸಾದ್ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net