ಅರಣ್ಯದಲ್ಲಿ ಬೆಳೆದಿದ್ದ ಗಾಂಜಾಗಿಡಗಳ ವಶ

Confiscation of marijuana plants grown in the forest
ಹನೂರು ತಾಲೂಕಿನ ದೊಡ್ಡಸಂಪಿಗೆ ಸಮೀಪದ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಗಾಂಜಾವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡರು.
ಹನೂರು ತಾಲೂಕಿನ ದೊಡ್ಡಸಂಪಿಗೆ ಸಮೀಪದ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಗಾಂಜಾವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡರು.
Published on: 

ಹನೂರು: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಸಂಪಿಗೆಯ ಕೂಳಿಹಟ್ಟಿ ಸಮೀಪದ ಬೆಳ್ಳಾಚಿ ಬೀಟ್ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಗಾಂಜಾವನ್ನು ಅಬಕಾರಿ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.

ಈ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮೈಸೂರು ಅಬಕಾರಿ ಜಂಟಿ ಆಯುಕ್ತ ಬಸವರಾಜು ಹಡಪದ, ಬಿಆರ್‌ಟಿ ಡಿಸಿಎಫ್ ಶ್ರೀಪತಿ, ಚಾ.ನಗರ ಅಬಕಾರಿ ಉಪ ಆಯುಕ್ತ ಪಿ.ಚಂದ್ರ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಕೆ.ಟಿ ವಿಜಯ ಕುಮಾರ್, ಕೊಳ್ಳೇಗಾಲ ಅಬಕಾರಿ ನಿರೀಕ್ಷಕ ಸಿ.ಎಂ ದಯಾನಂದ, ಚಾ.ನಗರ ಅಬಕಾರಿ ನಿರೀಕ್ಷಕ ಉಮಾಶಂಕರ್, ಬೈಲೂರು ಆರ್‌ಎಫ್‌ಒ ದೇವರಾಜು, ಡಿಆರ್‌ಎಫ್‌ಒ ರಾಜೇಶ್ ಅರಣ್ಯ ಪ್ರದೇಶದಲ್ಲಿ ಕೂಬಿಂಗ್ ನಡೆಸಿದಾಗ 5 ರಿಂದ 11 ಅಡಿ ಎತ್ತರದ 292 ಗಾಂಜಾ ಗಿಡಿಗಳು ಬೆಳೆದಿರುವುದು ಪತ್ತೆಯಾಗಿದೆ. 213 ಕೆ.ಜಿ 600 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಅಬಕಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಅಬಕಾರಿ ಉಪ ನಿರೀಕ್ಷಕಿ ನಂದಿನಿ ಅವರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net