ಅಧಿಕ ಭಾರದ ವಾಹನ ಸಂಚಾರ ನಿಷೇಧ

Prohibition of heavy vehicle traffic
ಕೌದಳ್ಳಿ ಬಳಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿರುವ ಸೇತುವೆ.
ಕೌದಳ್ಳಿ ಬಳಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿರುವ ಸೇತುವೆ. Prohibition of heavy vehicle traffic
Published on: 

ಹನೂರು: ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಕೌದಳ್ಳಿ ಬಳಿ ಮಳೆಯಿಂದಾಗಿ ಸೇತುವೆ, ರಸ್ತೆ ಹಾನಿಯಾಗಿರುವುದರಿಂದ ಗುರುವಾರದಿಂದ ಈ ಮಾರ್ಗದಲ್ಲಿ ಅಧಿಕ ಭಾರದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಈ ಸಂಬಂಧ ಮಲೆಮಹದೇಶ್ವರ ಬೆಟ್ಟ ಪಿಡಬ್ಲ್ಯುಡಿ ಉಪ ವಿಭಾಗದ ಎಇಇ ಅವರು ಹನೂರು ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ. ಸೆ.29 ರಂದು ಸುರಿದ ಭಾರಿ ಮಳೆಯಿಂದಾಗಿ ಕೌದಳ್ಳಿಯಲ್ಲಿ ಸೇತುವೆ ಮೇಲೆ ಯಥೇಚ್ಛವಾದ ನೀರು ಹರಿದ ಪರಿಣಾಮ ಸೇತುವೆ, ತಡೆಗೋಡೆ ಹಾಗೂ ರಸ್ತೆ ಹಾನಿಯಾಗಿದೆ. ಇದರಿಂದ ಭಾರಿ ವಾಹನಗಳು ಈ ಸೇತುವೆಯ ಮೇಲೆ ಸಂಚರಿಸಿದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಮಳೆ ಇರುವುದರಿಂದ ಶಾಶ್ವತ ರಿಪೇರಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ಲಘು ವಾಹನಗಳು ಮಾತ್ರ ಏಕಮುಖವಾಗಿ ಸಂಚರಿಸಲು ಸೇತುವೆಯನ್ನು ತಾತ್ಕಲಿಕವಾಗಿ ರಿಪೇರಿ ಪಡಿಸಲಾಗಿದೆ. ಹಳ್ಳದ ಗರಿಷ್ಠ ನೀರಿನ ಹರಿವಿನ ಬಗ್ಗೆ ಹೈಡ್ರಾಲಿಕ್ ಅಧ್ಯಯನ ನಡೆಸಿ ಹೊಸ ಸೇತುವೆ ನಿರ್ಮಾಣ ಕೈಗೊಳ್ಳಬೇಕಿರುತ್ತದೆ. ಅಲ್ಲಿಯವರೆಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕಿರುತ್ತದೆ. ಬದಲಿ ರಾಮಾಪುರ ಮಾರ್ಗವಾಗಿ ಸಂಚರಿಸಲು ಸೂಕ್ತ ನಿರ್ದೇನ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ಅದರಂತೆಯೇ ಪೊಲೀಸರು ಕ್ರಮಕೈಗೊಂಡಿದ್ದು, ಭಾರಿ ವಾಹನಗಳು ರಾಮಾಪುರದ ಮಾರ್ಗವಾಗಿ ಸಂಚರಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net