ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಸ್ ನಿಲ್ದಾಣ ಬಳಿ ಆಯೋಜಿಸಿದ್ದ ಮದ್ಯ ಮತ್ತು ಡ್ರಗ್ಸ್‌ಮುಕ್ತ ಸತ್ತೇಗಾಲ ರಸ್ತೆ ಓಟದ ಸ್ಪರ್ಧೆಗೆ ಡಿವೈಎಸ್ಪಿ ಮೋಹನ್ ಚಾಲನೆ ನೀಡಿದರು. ಬುದ್ಧ ಸೇವಾ ಸಮಿತಿ ಅಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಪದಾಧಿಕಾರಿ ರಾಜಶೇಖರ್, ನಾಗರಾಜು, ಪ್ರಭುಸ್ವಾಮಿ, ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘದ ಅಧ್ಯಕ್ಷ ಅವಿನಾಶ್ ಇದ್ದರು.
ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಭಾನುವಾರ ಬುದ್ಧ ಸೇವಾ ಸಮಿತಿ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಸಹಯೋಗದಲ್ಲಿ ಮದ್ಯ ಮತ್ತು ಡ್ರಗ್ಸ್‌ಮುಕ್ತ ಸತ್ತೇಗಾಲ ರಸ್ತೆ ಓಟ ಸ್ಪರ್ಧೆ ಆಯೋಜಿಸಲಾಗಿತ್ತು.
ಸತ್ತೇಗಾಲ ಬಸ್ ನಿಲ್ದಾಣ ಬಳಿ 5 ಕಿ.ಮೀ. ರಸ್ತೆ ಓಟ ಸ್ಪರ್ಧೆಗೆ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಮೋಹನ್ ಚಾಲನೆ ನೀಡಿದರು. ಬಳಿಕ ನೂರಾರು ಸ್ಪರ್ಧಿಗಳು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಡಿವೈಎಸ್ಪಿ ಮೋಹನ್ ಮಾತನಾಡಿ, ಯುವ ಜನರು ದುಶ್ಚಟಗಳಿಮದ ದೂರವಿರಬೇಕು. ಇದರಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಳಿಕ ಶಾಲಾ ಮಕ್ಕಳಿಗೆ ಕಬಡ್ಡಿ, ಖೋಖೋ ಹಾಗೂ ಯುವಕರಿಗೆ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಿ, ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬುದ್ಧ ಸೇವಾ ಸಮಿತಿ ಅಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಪದಾಧಿಕಾರಿ ರಾಜಶೇಖರ್, ನಾಗರಾಜು, ಪ್ರಭುಸ್ವಾಮಿ, ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘದ ಅಧ್ಯಕ್ಷ ಅವಿನಾಶ್ ಇದ್ದರು.