ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಬೇಡ

   ಯಳಂದೂರು ಪಟ್ಟಣದ ಸಿಡಿಎಸ್ ಸಮುದಾಯ ಭವನಕ್ಕೆ ಎಸ್.ಎಲ್. ನಯನಾ ಭೇಟಿ ನೀಡಿ ಪರಿಕರಗಳನ್ನು ವೀಕ್ಷಿಸಿದರು. ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಇದ್ದರು.
ಯಳಂದೂರು ಪಟ್ಟಣದ ಸಿಡಿಎಸ್ ಸಮುದಾಯ ಭವನಕ್ಕೆ ಎಸ್.ಎಲ್. ನಯನಾ ಭೇಟಿ ನೀಡಿ ಪರಿಕರಗಳನ್ನು ವೀಕ್ಷಿಸಿದರು. ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಇದ್ದರು.
Published on
ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ಪರಿಶಿಷ್ಟ ಜಾತಿ, ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅನುದಾನದಡಿ ಸಮುದಾಯ ಭವನ ಹಾಗೂ ಹಾಸ್ಟೆಲ್‌ಗಳಿಗೆ ನೀಡಲಾದ ಪರಿಕರಗಳನ್ನು ತಹಸೀಲ್ದಾರ್ ಹಾಗೂ ಪಪಂ ಆಡಳಿತಾಧಿಕಾರಿ ಎಸ್.ಎಲ್.ನಯನಾ ಶನಿವಾರ ಪರಿಶೀಲಿಸಿದರು.
ಪಟ್ಟಣದ ಸಿಡಿಎಸ್ ಸಮುದಾಯ ಭವನಕ್ಕೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿ ಮಾತನಾಡಿದ ನಯನಾ, ಪಟ್ಟಣ ಪಂಚಾಯಿತಿಯ ನಿಗದಿತ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಮುದಾಯ ಭವನಗಳಿಗೆ 4 ಲಕ್ಷ ರೂ. ವೆಚ್ಚದಲ್ಲಿ ಚೇರ್‌ಗಳು, ಪಾತ್ರೆಗಳು ಸೇರಿದಂತೆ ಇತರ ಪರಿಕರ ನೀಡಲಾಗಿದೆ. ಅಲ್ಲದೆ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ 60 ಸಾವಿರ ರೂ. ವೆಚ್ಚದಲ್ಲಿ ತಟ್ಟೆ, ಲೋಟ, ಬೆಡ್ ಶೀಟ್, ದಿಂಬು ಕವರ್‌ಗಳು ಸೇರಿದಂತೆ ಇತರ ವಸ್ತುಗಳನ್ನು ನೀಡಲಾಗುತ್ತಿದೆ. ಹಾಗಾಗಿ ಗುಣಮಟ್ಟದ ವಸ್ತುಗಳನ್ನು ನೀಡಬೇಕು. ಇದಕ್ಕೆ ನಿಗದಿತ ಬಿಲ್‌ಗಳನ್ನು ನಮೂದಿಸಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಆರೋಗ್ಯ ನಿರೀಕ್ಷಕ ರಾಘವೇಂದ್ರ, ಜೆಇ ನಾಗೇಂದ್ರ, ಸಮುದಾಯ ಸಂಘಟನಾ ಅಧಿಕಾರಿ ಪರಶಿವ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net