ಆರೋಗ್ಯಾಧಿಕಾರಿ ರಾಘವೇಂದ್ರ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ನಮಗೆ ಅಗತ್ಯವಾಗಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು, ಕಸದ ಗುಡ್ಡೆಗಳು ಹಾಕುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಮಳೆ ಬಂದರೆ ಈ ಕಸವೆಲ್ಲ ಮತ್ತೆ ಚರಂಡಿ ಸೇರುವ ಅಪಾಯವಿದೆ. ಅಲ್ಲದೆ ಬೀದಿ ನಾಯಿಗಳು ಪ್ಲಾಸ್ಟಿಕನ್ನು ಹರಿದು ಕಸವನ್ನು ರಸ್ತೆಗೆ ಚೆಲ್ಲುತ್ತವೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಪ್ರತಿನಿತ್ಯ ಪಟ್ಟಣ ಪಂಚಾಯಿತಿಯ ಕಸದ ವಾಹನ ಪ್ರತಿ ವಾರ್ಡಿನ ಬೀದಿಗೂ ಬರುತ್ತದೆ. ಎಲ್ಲರೂ ತಪ್ಪದೆ ಹಸಿ ಹಾಗೂ ಒಣ ಕಸವನ್ನು ತಮ್ಮ ಮನೆಯಲ್ಲೇ ಬೇರ್ಪಡಿಸಿ ವಾಹನ ಬರುವ ಹೊತ್ತಲ್ಲಿ ಇದನ್ನು ನೀಡಬೇಕು. ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದ ಪಂಚಾಯಿತಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.