ಯಳಂದೂರು: ಸಮೀಪದ ಹೊಮ್ಮ ಗ್ರಾಮದ ಬಳಿ ಇರುವ ಬಸವರಾಜಪುರ ಗ್ರಾಮದಲ್ಲಿ ಬುಧವಾರ ಗಂಡು ಚಿರತೆಯ ಕಳೇಬರ ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಯಸ್ಕ ಗಂಡು ಚಿರತೆ ಸತ್ತು ಮೂರ್ನಾಲ್ಕು ದಿನವಾಗಿರಬಹುದು ಎಂದು ಶಂಕಿಸಲಾಗಿದೆ. ಗ್ರಾಮದಲ್ಲಿ ಹೊಸದಾಗಿ ನೀಡಿರುವ ಖಾಲಿ ನಿವೇಶನಗಳಲ್ಲಿ ಈ ಚಿರತೆ ಕಳೇಬರ ಕಂಡುಬಂದಿದೆ. ಇದರ ಅನತಿ ದೂರದಲ್ಲೇ ಕರುವೂ ಮೃತಪಟ್ಟಿದೆ. ಹೀಗಾಗಿ ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಸಹಜ ಸಾವೋ ಅಥವಾ ಕೊಲ್ಲಲಾಗಿದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಗ್ರಾಮಸ್ಥರು ಸಂತೆಮರಹಳ್ಳಿ ಪೊಲೀಸ್ ಠಾಣೆಗೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ
ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅರಣ್ಯ ಅಧಿಕಾರಿಗಳ ಸಮ್ಮುಖ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಈ ಚಿರತೆಯು ಗೂಳೀಪುರ, ಹೊಮ್ಮ, ಇರಸವಾಡಿ, ಅಂಬಳೆ, ಚಂಗಚಹಳ್ಳಿ ಗ್ರಾಮದ ಸುತ್ತಮುತ್ತಲೂ ಓಡಾಡುತ್ತಿತ್ತು ಎನ್ನಲಾಗಿದೆ.
14ವೈಎಲ್‌ಡಿ ಚಿತ್ರ04 ಯಳಂದೂರು ಸಮೀಪದ ದೇವರಾಜಪುರ ಗ್ರಾಮದಲ್ಲಿ ಮೃತಪಟ್ಟಿರುವ ಚಿರತೆ ಕಳೇಬರ