ಅಂಬೇಡ್ಕರ್ ಭವನದ ಜಾಗದ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ

ಯಳಂದೂರು ಪಟ್ಟಣ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಬುಧವಾರ ವೈ.ಕೆ.ಮೋಳೆ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಮುಖಂಡ ಡಾ.ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಯಳಂದೂರು ಪಟ್ಟಣ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಬುಧವಾರ ವೈ.ಕೆ.ಮೋಳೆ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಮುಖಂಡ ಡಾ.ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
Published on
ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲ್ಲಿನ ಜಾಗದ ಸಮಸ್ಯೆ ಬಗೆಹರಿಯದಿದ್ದರೆ ಜೂ.15ರಂದು ಯಳಂದೂರಿನಿಂದ ಚಾಮರಾಜನಗರದ ಜಿಲ್ಲಾಡಳಿತ ಭವನಕ್ಕೆ ಬೃಹತ್ ಕಾಲ್ನಡಿಗೆಯ ಜಾಥಾ ನಡೆಸಲಾಗುವುದು ಎಂದು ಎಎಸ್‌ಎಸ್‌ಕೆ ಅಧ್ಯಕ್ಷ ಡಾ.ಕೆ.ಎಂ.ಸಂದೇಶ್ ಎಚ್ಚರಿಸಿದರು.
ಈ ಸಂಬಂಧ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ತೆರಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗ್ರಾಮದ ದಲಿತ ಜನಾಂಗದವರ ಜತೆ ಸಭೆ ನಡೆಸಿ, ನಂತರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳಿ ಮಾತನಾಡಿದರು. ಈ ಗ್ರಾಮದ ಗ್ರಾಮ ಠಾಣಾ ಸರಹದ್ದಿನಲ್ಲಿ 3.11 ಗುಂಟೆ ಜಮೀನು ಇದೆ. ಇದರ ಪೈಕಿ 2.03 ಎಕರೆ ಜಮೀನು ಮತ್ತು 1.08 ಎಕರೆ ಜಮೀನು ಖರಾಬು ಜಮೀನಾಗಿದೆ. ಈ ಜಾಗದಲ್ಲೇ ಅಂಬೇಡ್ಕರ್ ಭವನ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆ ಜಾಗವನ್ನು ಗುರುತಿಸಿಕೊಟ್ಟಿದೆ.
ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಇಲಾಖೆಯಿಂದ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಈ ಜಾಗದ ವಿಷಯವಾಗಿ ಎರಡ ಕೋಮಿನ ನಡುವೆ ಗೊಂದಲ ಏರ್ಪಟ್ಟಿದ್ದರಿಂದ ಕಳೆದ 4 ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು ಇದು ಪೂರ್ಣಗೊಂಡಿಲ್ಲ. ಹಾಗಾಗಿ ಇಲಾಖೆಯ ಅಧಿಕಾರಿಗಳು ಸರ್ವೇ ನಂ.543ರ ಈ ಸ್ಥಳವನ್ನು ಸರ್ವೇ ಮಾಡಿಕೊಡಬೇಕು. ಈ ವಿಷಯ ಕೋರ್ಟಿನಲ್ಲಿದ್ದರೂ ಇಲಾಖೆಯಿಂದ ಸರ್ವೇ ಮಾಡಿಸಲು ಯಾವುದೇ ತೊಂದರೆ ಇಲ್ಲ. ಈ ಸಂಬಂಧ ಮಾತನಾಡಲು ನಾನು ವೈ.ಕೆ.ಮೋಳೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂಬ ಮಾಹಿತಿ ಗೊತ್ತಾದ ಕೂಡಲೇ ಕೆಲವರು ದೂರು ನೀಡಿದ್ದರಿಂದ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಾಗಾಗಿ ನಾನು ಪಟ್ಟಣದಲ್ಲಿ ಈ ಸಂಬಂಧ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ತಿಂಗಳ ಅಂತ್ಯದವರೆಗೆ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜೂ.15ರಂದು ಪಟ್ಟಣದಿಂದ 25 ಸಾವಿರ ಜನರೊಂದಿಗೆ ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದ ಕೃಷ್ಣಯ್ಯ, ಕೃಷ್ಣಮೂರ್ತಿ, ಬುಲೆಟ್ ಸಿದ್ದರಾಜು, ಆರ್.ರಂಗಸ್ವಾಮಿ, ಬಿ.ರಂಗಸ್ವಾಮಿ, ಮಂಜುನಾಥ್, ಪ್ರಸಾದ್, ಅಭಿ, ವಿಶ್ವ, ನಂಜುಂಡಸ್ವಾಮಿ, ಹರೀಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net