ಗುಂಡ್ಲುಪೇಟೆಯಲ್ಲಿ ರಾಯರ ಆರಾಧನೆ

ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ ಅಂಗವಾಗಿ ಕರ್ನಾಟಿಕ್ ಅಡ್ಡ ತಂಡದ ಸದಸ್ಯರು ದಾಸರ ಪದಗಳನ್ನು ಹಾಡಿದರು.
ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ ಅಂಗವಾಗಿ ಕರ್ನಾಟಿಕ್ ಅಡ್ಡ ತಂಡದ ಸದಸ್ಯರು ದಾಸರ ಪದಗಳನ್ನು ಹಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಪೂಜೆ
ಗುಂಡ್ಲುಪೇಟೆ: ಪಟ್ಟಣದ ಶ್ರೀರಾಮ ದೇವರ ಗುಡ್ಡದ ತಪ್ಪಲಿನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ ಜರುಗಿತು.
ಶನಿವಾರ ಪೂರ್ವಾರಾಧನೆಯಲ್ಲಿ ಬೆಳಗ್ಗೆ ಗಣಪತಿ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೋಮ ನಂತರ ಗಿರಿಜಾ ಮಲ್ಲೇಶ್, ಶಾರದಾ ಸತ್ಸಂಗ ಮತ್ತು ವಿಪ್ರ ಮಹಿಳಾ ಬಳಗದ ವತಿಯಿಂದ ದೇವರನಾಮ ಭಜನೆ ನೆರೆದಿದ್ದ ಭಕ್ತರು ತಲೆದೂಗುವಂತೆ ಮಾಡಿತು.
ಭಾನುವಾರ ಮಧ್ಯಾರಾಧನೆಯಲ್ಲಿ ಬೆಂಗಳೂರಿನ ಕುಮಾರ್ ಬೆನ್ಕಲ್ ಮತ್ತು ಅಪೂರ್ವ ಶ್ರೀಕುಮಾರ್ ಅವರು ವಾದ್ಯ ನುಡಿಸಿದ ದಾಸರವಾಣಿ, ಬೆಂಗಳೂರು ಯುವ ಗಾಯಕರ ತಂಡದ ಕರ್ನಾಟಿಕ್ ಅಡ್ಡದ ಸದಸ್ಯರು ದಾಸರ ಪದಗಳ ಗಾನಾಮೃತ ಭಕ್ತರನ್ನು ಭಕ್ತಿಯ ಕಡಲಲ್ಲಿ ತೇಲಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net