ಎಲ್ಲ ರಂಗದಲ್ಲಿಯೂ ಮಹಿಳೆಗೆ ಸಮಾನ ಅವಕಾಶ ಸಿಗಲಿ

ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಗಣೇಶ್ ಪ್ರಸಾದ್ ಸನ್ಮಾನಿಸಿದರು. ದೀಪಾಬುದ್ದೆ, ಶಿಶು ಅಭಿವೃದ್ದಿ ಅಧಿಕಾರಿ ಹೇಮಾವತಿ, ದಾಕ್ಷಾಯಿಣಮ್ಮ, ಉಮಾಪತಿ ಇದ್ದರು.
ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಗಣೇಶ್ ಪ್ರಸಾದ್ ಸನ್ಮಾನಿಸಿದರು. ದೀಪಾಬುದ್ದೆ, ಶಿಶು ಅಭಿವೃದ್ದಿ ಅಧಿಕಾರಿ ಹೇಮಾವತಿ, ದಾಕ್ಷಾಯಿಣಮ್ಮ, ಉಮಾಪತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಆಶಯ
ಗುಂಡ್ಲುಪೇಟೆ: ಎಲ್ಲ ರಂಗಗಳಲ್ಲಿಯೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದು, ಅವರಿಗೆ ಸಮಾನಾವಕಾಶ ನೀಡಬೇಕಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ದೊಡ್ಡಶಕ್ತಿಯಾಗಿ ಇದ್ದಾಳೆ. ಮಹಿಳಾ ಮತದಾರರೇ ಹೆಚ್ಚಾಗಿರುವ ತಾಲೂಕಿನ ಶಾಸಕಿಯಾಗಿದ್ದ ದಿ.ಕೆ.ಎಸ್.ನಾಗರತ್ನಮ್ಮ ವಿರೋಧ ಪಕ್ಷದ ನಾಯಕಿಯಾಗಿ, ಸಚಿವೆಯಾಗಿ ವಿಧಾನಸಭೆಯ ಮೊದಲ ಸ್ಪೀಕರ್ ಆಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಮದರ್ ಥೆರೆಸಾ, ಇಂದಿರಾಗಾಂಧಿ ಮುಂತಾದ ಮಹಿಳೆಯರು ತಮ್ಮ ಸಾಧನೆ ಮೂಲಕ ಹೆಸರಾಗಿದ್ದಾರೆ ಎಂದರು.
ಮಹಿಳಾ ದಿನವನ್ನು ಆಚರಣೆಗೆ ಸೀಮಿತಗೊಳಿಸದೆ ಸೈನ್ಯ, ಬಾಹ್ಯಾಕಾಶಯಾನ ಮುಂತಾದ ಅತ್ಯಂತ ಕ್ಲಿಷ್ಟಕರ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಯಾವ ಮನೆಯಲ್ಲಿ ಮಹಿಳೆ ಚಟುವಟಿಕೆಯಿಂದರುತ್ತಾಳೊ ಅಂತಹ ಕುಟುಂಬ ಅಭಿವೃದ್ಧಿ ಹೊಂದುತ್ತದೆ. ಹೆಚ್ಚಿನ ಮಹಿಳೆರು ಶಿಕ್ಷಣ ಕ್ಷೇತ್ರದಲ್ಲಿದ್ದು ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದಾಗಿದೆ. ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸವಲತ್ತು ದೊರಕುವಂತೆ ಮಾಡಿದೆ. ಮಹಿಳೆಯರು ಸಾಮರಸ್ಯ ಹಾಗೂ ಸ್ನೇಹದಿಂದ ಬದುಕುವ ಜತೆಗೆ ಎಲ್ಲ ಅವಕಾಶಗಳನ್ನು ಸದ್ಬಳಕೆ ಮಡಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು. ಏ 21ರಂದು ಪಟ್ಟಣಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು ಗ್ಯಾರಂಟಿ ಯೋಜನೆಗಳ ಪಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಸಮತಾ ಸೊಸೈಟಿಯ ದೀಪಾಬುದ್ದೆ, ಶಿಶು ಅಭಿವೃದ್ದಿ ಅಧಿಕಾರಿ ಹೇಮಾವತಿ, ಸ್ತ್ರೀಶಕ್ತಿ ಸಂಘಗಳ ಅಧ್ಯಕ್ಷೆ ದಾಕ್ಷಾಯಿಣಮ್ಮ, ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಉಮಾಪತಿ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net