ಮಹಿಳೆಯರು, ಆರ್ಥಿಕವಾಗಿ ಅಭಿವೃದ್ಧಿ ಹೊಂದಿ

 ಹನೂರು ತಾಲೂಕಿನ ಕಂಡಯ್ಯನ ಪಾಳ್ಯದ ಪರಚಕಟ್ಟೆ ಕೆರೆಗೆ ಜಿಪಂ ಸಿಇಒ ಮೋನಾರೋತ್ ಅವರು ಮೀನಿನ ಮರಿಗಳನ್ನು ಬಿಟ್ಟರು. ಉಮೇಶ್, ಮಹದೇವಪ್ರಭು ಇತರರಿದ್ದರು.
ಹನೂರು ತಾಲೂಕಿನ ಕಂಡಯ್ಯನ ಪಾಳ್ಯದ ಪರಚಕಟ್ಟೆ ಕೆರೆಗೆ ಜಿಪಂ ಸಿಇಒ ಮೋನಾರೋತ್ ಅವರು ಮೀನಿನ ಮರಿಗಳನ್ನು ಬಿಟ್ಟರು. ಉಮೇಶ್, ಮಹದೇವಪ್ರಭು ಇತರರಿದ್ದರು.
Published on

ಜಿಪಂ ಸಿಇಒ ಮೋನಾರೋತ್ ಸಲಹೆ

ಹನೂರು: ಸರ್ಕಾರದಿಂದ ಸಿಗುವ ಪ್ರಯೋಜನವನ್ನು ಪಡೆದುಕೊಂಡು ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಮೋನಾರೋತ್ ತಿಳಿಸಿದರು.
ತಾಲೂಕಿನ ಚಿಕ್ಕಮಾಲಾಪುರ ಗ್ರಾಪಂ ವ್ಯಾಪ್ತಿಯ ಕಂಡಯ್ಯನ ಪಾಳ್ಯದಲ್ಲಿ ಸೋಮವಾರ ಎನ್‌ಆರ್‌ಎಲ್‌ಎಂ, ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಪರಚಕಟ್ಟೆ ಕೆರೆಗೆ ಮೀನಿನ ಮರಿಗಳನ್ನು ಬಿಟ್ಟು ಮಾತನಾಡಿದರು.
ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರ. ಇವರ ಸಬಲೀಕರಣಕ್ಕೆ ಸ್ವ-ಸಹಾಯ ಸಂಘಗಳು ಸಹಕಾರಿಯಾಗಿವೆ. ಜತೆಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ದಾರಿ ಮಾಡಿಕೊಡುತ್ತವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಇವರ ಕಾರ್ಯಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈ ದಿಸೆಯಲ್ಲಿ ಅಗ್ನಿಸಾಕ್ಷಿ ಗ್ರಾಪಂ ಒಕ್ಕೂಟ ಹಾಗೂ ಹುಚ್ಚಮ್ಮ ಸ್ವ-ಸಹಾಯ ಮಹಿಳಾ ಸಂಘದಿಂದ ಕೆರೆಗೆ ಮೀನಿನ ಮರಿಗಳನ್ನು ಬಿಡಲಾಗುತ್ತಿದೆ. ಆದ್ದರಿಂದ ಒಕ್ಕೂಟದ ವ್ಯಾಪ್ತಿಯಲ್ಲಿರುವ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ಗ್ರಾಪಂ ಆಡಳಿತ ಸಂಪೂರ್ಣ ಸಹಕಾರ ನೀಡಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ ಉಮೇಶ್, ಪಿಡಿಒ ಮಹದೇವಪ್ರಭು, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮಹಿಳೆಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net