ಮಹಿಳೆ ಕೊಲೆ ಪ್ರಕರಣದಲ್ಲಿ ಖುಲಾಸೆ

 ಯಳಂದೂರು ತಾಲೂಕಿನ ಅಗರ ಗ್ರಾಮದ ನಾಗೇಂದ್ರ
ಯಳಂದೂರು ತಾಲೂಕಿನ ಅಗರ ಗ್ರಾಮದ ನಾಗೇಂದ್ರ
Published on
ಯಳಂದೂರು: ಮಹಿಳೆ ಕೊಲೆ ಪ್ರಕರಣದಲ್ಲಿ ತಾಲೂಕಿನ ಅಗರ ಗ್ರಾಮದ ನಿವಾಸಿಯೂ ಆದ ಸೆಸ್ಕ್ ಲೈನ್‌ಮನ್ ನಾಗೇಂದ್ರ ಅಲಿಯಾಸ್ ಆನಂದ ಅವರನ್ನು ಕೊಳ್ಳೇಗಾಲ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಖುಲಾಸೆಗೊಳಿಸಿದೆ.
2023ರ ಡಿ.16 ರಂದು ಕೊಳ್ಳೇಗಾಲದ ಅದರ್ಶ ನಗರದ ಮನೆಯೊಂದರಲ್ಲಿ ಯಳಂದೂರು ತಾಲೂಕಿನ ಅಗರ ಗ್ರಾಮದ ರೇಖಾ ಎಂಬ ಮಹಿಳೆ ಶವ ಕೊಳೆತ ಸ್ಥತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಪಾಲಕರು ಕೊಳ್ಳೇಗಾಲದ ಪೊಲೀಸ್ ಠಾಣೆಯಲ್ಲಿ ನಾಗೇಂದ್ರ ವಿರುದ್ಧ ದೂರು ದಾಖಲಿಸಿದ್ದರು.
ಘಟನೆ ಬಳಿಕ ಪೊಲೀಸರು ನಾಗೇಂದ್ರನನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ನಂತರ ಈತನ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿತ್ತು. ನಂತರ ನ್ಯಾಯಾಲಯದಲ್ಲಿ ಈ ಸಂಬಂಧ ವಾದ-ವಿವಾದಗಳು ನಡೆದಿದ್ದವು. ಆರೋಪಿ ಪರ ಯಾವುದೇ ಪ್ರಬಲ ಸಾಕ್ಷಿ ಇಲ್ಲದ ಕಾರಣ ಹಾಗೂ ಕೊಲೆಗೂ ಈತನಿಗೂ ಸಂಬಂಧ ಇಲ್ಲದ ಕಾರಣ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ನಾಗೇಂದ್ರನನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿ ಮಾ.27 ರಂದು ತೀರ್ಪು ನೀಡಿದ್ದಾರೆ.
ನಾಗೇಂದ್ರನ ಪರ ಚಾಮರಾಜನಗರ ವಕೀಲ ಬಿ.ಪ್ರಸನ್ನಕುಮಾರ್ ವಾದ ಮಂಡಿಸಿದರೆ, ಮಹಿಳೆ ಪರ ಸರ್ಕಾರಿ ಅಭಿಯೋಜಕ ಗಿರೀಶ್ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net