ಪಿ.ಜಿ. ಪಾಳ್ಯ ಕೆರೆಯಲ್ಲಿ ಕಾಡಾನೆಗಳ ಜಲ ಕ್ರೀಡೆ

ಪಿ.ಜಿ.ಪಾಳ್ಯ ಅರಣ್ಯ ಪ್ರದೇಶ ವ್ಯಾಪ್ತಿಯ ಕೆರೆಗೆ ನೀರು ಕುಡಿಯಲು ಬಂದ ಕಾಡಾನೆಗಳು ಜಲಕ್ರೀಡೆಯಲ್ಲಿ ತೊಡಗಿರುವುದು.
ಪಿ.ಜಿ.ಪಾಳ್ಯ ಅರಣ್ಯ ಪ್ರದೇಶ ವ್ಯಾಪ್ತಿಯ ಕೆರೆಗೆ ನೀರು ಕುಡಿಯಲು ಬಂದ ಕಾಡಾನೆಗಳು ಜಲಕ್ರೀಡೆಯಲ್ಲಿ ತೊಡಗಿರುವುದು.
Published on
ಹನೂರು: ಸುಡುವ ಬಿಸಿಲಿನ ಬೇಗೆ ತಾಳಲಾರದೆ ತಾಲೂಕಿನ ಪಿ.ಜಿ. ಪಾಳ್ಯ ವ್ಯಾಪ್ತಿಯ ಅರಣ್ಯ ಪ್ರದೇಶದ ಕೆರೆಯೊಂದರಲ್ಲಿ ಶನಿವಾರ ನೀರು ಕುಡಿಯಲು ಆಗಮಿಸಿದ ಸುಮಾರು 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಜಲಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದೇಹವನ್ನು ತಂಪು ಮಾಡಿಕೊಂಡವು.
ತಾಲೂಕಿನಲ್ಲಿ ಈ ಬಾರಿ ಮಳೆಯ ಕೊರತೆಯಿದಾಗಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಇತ್ತ ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ದು, ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ಇದೆ. ಅರಣ್ಯ ಪ್ರದೇಶದ ಕೆರೆ, ಕಟ್ಟೆಗಳಲ್ಲೂ ನೀರು ಬತ್ತಿಹೋಗಿದ್ದು, ಕೆಲವು ಕಡೆಗಳಲ್ಲಿ ಕಾಡು ಪ್ರಾಣಿಗಳು ನೀರನ್ನು ಅರಸಿ ಅಲೆಯುತ್ತಿರುವುದು ಕಂಡು ಬರುತ್ತಿದೆ. ]
ಹೀಗಿರುವಾಗ ಪಿ.ಜಿ.ಪಾಳ್ಯ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿದ್ದ ಕೆರೆಯೊಂದಕ್ಕೆ ಸುಮಾರು 15ಕ್ಕೂ ಕಾಡಾನೆಗಳ ಹಿಂಡು ಆಗಮಿಸಿ ನೀರು ಕುಡಿದು ದಣಿವಾರಿಸಿಕೊಂಡವು. ಜತೆಗೆ ಕೆಲಕಾಲ ಜಲಕ್ರೀಡೆಯಲ್ಲಿ ತೊಡಗಿ ಬಳಿಕ ಅರಣ್ಯ ಪ್ರದೇಶದತ್ತ ಸಾಗಿದವು. ಈ ದೃಶ್ಯವನ್ನು ಸಾರ್ವಜನಿಕರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net