ರಸ್ತೆಯಲ್ಲಿ ಅಡ್ಡಲಾಗಿ ನಿಂತ ಕಾಡಾನೆಗಳು

ಬಂಡೀಪುರ -ಊಟಿ ರಸ್ತೆಯಲ್ಲಿ ಅಡ್ಡಲಾಗಿ ನಿಂತ ಕಾಡಾನೆಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದ ಸಂದರ್ಭ.
ಬಂಡೀಪುರ -ಊಟಿ ರಸ್ತೆಯಲ್ಲಿ ಅಡ್ಡಲಾಗಿ ನಿಂತ ಕಾಡಾನೆಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದ ಸಂದರ್ಭ.
Published on
ಗುಂಡ್ಲುಪೇಟೆ: ರಸ್ತೆಯಲ್ಲಿ ಅಡ್ಡಲಾಗಿ ನಿಂತ ಕಾಡಾನೆಗಳ ಹಿಂಡಿನಿಂದ ಮಂಗಳವಾರ ಬಂಡೀಪುರ ಮಾರ್ಗವಾಗಿ ಊಟಿಗೆ ತೆರಳುತ್ತಿದ್ದ ವಾಹನಗಳ ಸಂಚಾರ ಕೆಲ ಸಮಯ ಸ್ಥಗಿತಗೊಂಡಿತು.
ಬೆಳಗ್ಗೆ 9 ಗಂಟೆ ಸಮಯದಲ್ಲಿ ಕಾಡಿನಿಂದ ರಸ್ತೆಗಿಳಿದ ಕಾಡಾನೆಗಳ ಹಿಂಡು ಕಂಡ ಪ್ರವಾಸಿಗರು ತಮ್ಮ ವಾಹನಗಳ ಚಲಾಯಿಸದೆ ನಿಲ್ಲಿಸಿಕೊಂಡರು. ರಸ್ತೆಬದಿ ಮೂರು ಕಾಡಾನೆಗಳು ನಿಂತಿದ್ದರೆ ಮತ್ತೊಂದು ಕಾಡಾನೆ ರಸ್ತೆಯ ಅತ್ತಿತ್ತ ಓಡಾಡುತ್ತಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಯಿತು.
ಇದೇ ಸಂದರ್ಭ ಹಲವರು ತಮ್ಮ ಕ್ಯಾಮರಾ, ಮೊಬೈಲ್‌ಗಳಲ್ಲಿ ಕಾಡಾನೆಗಳ ಸಂಚಾರ ದೃಶ್ಯವನ್ನು ಸೆರೆಹಿಡಿದುಕೊಂಡರು. ಸುಮಾರು 10 ನಿಮಿಷಗಳ ನಂತರ ಆನೆಗಳು ರಸ್ತೆ ದಾಟಿ ಕಾಡಿನ ಕಡೆ ತೆರಳಿದವು. ನಂತರ ವಾಹನಗಳ ಸಂಚಾರ ಸುಗಮಗೊಂಡಿತು. \
ಕಾಡೆಮ್ಮೆ ಕೊಂದು ತಿಂದ ಹುಲಿ: ಬಂಡೀಪುರದ ಸಫಾರಿ ಮಾರ್ಗದ ಕಡಮತ್ತೂರು ಕಟ್ಟೆ ಸಮೀಪದಲ್ಲಿ ಹುಲಿಯೊಂದು ಕಾಟಿಯನ್ನು ಬೇಟೆಯಾಡಿ ತಿನ್ನುತ್ತಿರುವ ಫೋಟೋ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ಸಂಜೆ ಸಫಾರಿಗೆ ಹೋಗಿದ್ದ ಪ್ರವಾಸಿಗರ ಕಣ್ಣಿಗೆ ಬಿದ್ದಿದ್ದ ಕಾಟಿಯೊಂದರ ಕಳೇಬರವನ್ನು ಮಂಗಳವಾರ ಬೇರೆ ಬೇರೆ ಸಮಯದಲ್ಲಿ ಒಂದು ಗಂಡು ಮತ್ತೊಂದು ಹೆಣ್ಣುಹುಲಿ ತಿನ್ನುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net