ಅರಕನಹಳ್ಳದ ಬಳಿ ಕಾಡಾನೆಗಳು ಪ್ರತ್ಯಕ್ಷ

ಅಜ್ಜೀಪುರಕ್ಕೆ ತೆರಳುವ ಅರಕನಹಳ್ಳದ ಬಳಿ ಕಾಣಿಸಿಕೊಂಡ ಕಾಡಾನೆಗಳು.
ಅಜ್ಜೀಪುರಕ್ಕೆ ತೆರಳುವ ಅರಕನಹಳ್ಳದ ಬಳಿ ಕಾಣಿಸಿಕೊಂಡ ಕಾಡಾನೆಗಳು.
Published on
ಹನೂರು: ಪಟ್ಟಣದ ಹೊರವಲಯದ ಅಜ್ಜೀಪುರಕ್ಕೆ ತೆರಳುವ ಅರಕನಹಳ್ಳದ ಬಳಿ ಬುಧವಾರ ಕಾಡಾನೆಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತು.
ಈ ಮಾರ್ಗವು ಅರಣ್ಯ ಪ್ರದೇಶದಿಂದ ಕೂಡಿದ್ದು, ರಸ್ತೆ ಬದಿಯಲ್ಲಿನ ಅರಕನಹಳ್ಳಕ್ಕೆ ಆಗಾಗ್ಗೆ ಕಾಡಾನೆಗಳು ನೀರು ಕುಡಿಯಲು ಆಗಮಿಸುತ್ತಿದ್ದವು. ಆದರೆ ಕಳೆದ 2 ತಿಂಗಳಿನಿಂದ ಕಾಣಿಸಿಕೊಂಡಿರಲಿಲ್ಲ. ಮಧ್ಯಾಹ್ನ ರಸ್ತೆಬದಿ ಅರಣ್ಯ ಪ್ರದೇಶದಲ್ಲಿ 2 ಕಾಡಾನೆಗಳು ಪ್ರತ್ಯಕ್ಷವಾದವು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಆತಂಕಕ್ಕೆ ಒಳಗಾದರು. ಕೆಲ ಹೊತ್ತಿನ ಬಳಿಕ ಕಾಡಾನೆಗಳು ಕಾಡಿನೊಳಗೆ ತೆರಳಿದವು.
ಕಾಡಾನೆಗಳು ರಸ್ತೆಬದಿಗೆ ಆಗಮಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net