ಈ ಮಾರ್ಗವು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕಾವೇರಿ ವನ್ಯಜೀವಿಧಾಮದ ನಡುವೆ ಇದು ಹಾದು ಹೋಗಿದೆ. ಕಳೆದ ಒಂದು ತಿಂಗಳ ಹಿಂದೆ ಈ ಮಾರ್ಗದ ಗಡಿ ಚೆಕ್‌ಪೋಸ್ಟ್ ಮುಂಭಾಗ ಕಾಡಾನೆಯೊಂದು ಗಸ್ತಿನಲ್ಲಿದ್ದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಘಾಸಿಗೊಳಿಸಿತ್ತು. ರಾತ್ರಿ ಹೆಣ್ಣಾನೆಯೊಂದು ರಸ್ತೆ ಮಧ್ಯೆಯಲ್ಲೇ ಸಂಚರಿಸಿದರೆ, ಸಲಗವೊಂದು ರಸ್ತೆ ಬದಿ ಕಾಣಿಸಿಕೊಂಡಿದೆ. ಈ ವೇಳೆ ವಾಹನ ಸವಾರರು ಭಯಭೀತರಾಗಿದ್ದಾರೆ.