ಕಾಡಾನೆಯಿಂದ ಮುಸುಕಿನ ಜೋಳ ನಾಶ

ಕಡುವಾಳೆ ಗ್ರಾಮದ ಸಿದ್ದಶೆಟ್ಟಿ ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ ಮುಸುಕಿನ ಜೋಳವನ್ನು ತಿನ್ನುತ್ತಿರುವುದು.
ಕಡುವಾಳೆ ಗ್ರಾಮದ ಸಿದ್ದಶೆಟ್ಟಿ ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ ಮುಸುಕಿನ ಜೋಳವನ್ನು ತಿನ್ನುತ್ತಿರುವುದು.
Published on
ಹನೂರು: ತಾಲೂಕಿನ ಕುಡುವಾಳೆ ಗ್ರಾಮದ ಜಮೀನೊಂದಕ್ಕೆ ಶುಕ್ರವಾರ ಹಾಡಹಗಲೇ ಕಾಡಾನೆ ಲಗ್ಗೆ ಇಟ್ಟು ಮುಸುಕಿನ ಜೋಳವನ್ನು ನಾಶಪಡಿಸಿದೆ.
ಗ್ರಾಮದ ರೈತ ಸಿದ್ದಶೆಟ್ಟಿ ಮುಸುಕಿನ ಜೋಳ ಬೆಳೆದಿದ್ದು, ತೆನೆಗಳು ಬಂದಿದ್ದವು. ಬೆಳಗ್ಗೆ ಸಮೀಪದ ಅರಣ್ಯ ಪ್ರದೇಶದಿಂದ ಕಾಡಾನೆಯೊಂದು ಜಮೀನಿಗೆ ಲಗ್ಗೆ ಇಟ್ಟಿದೆ. ಇದನ್ನು ಗಮನಿಸಿದ ರೈತ ಹಾಗೂ ಅಕ್ಕಪಕ್ಕದ ರೈತರು ಭಯಭೀತರಾಗಿ ನಿಂತಲ್ಲೇ ನಿಂತು ಕಾಡಾನೆಯ ಹಾವಳಿಯನ್ನು ವೀಕ್ಷಿಸಿದರು. ಕಾಡಾನೆಯು ಮುಸುಕಿನ ಜೋಳದ ಫಸಲನ್ನು ತಿಂದು ತುಳಿದು ನಾಶಪಡಿಸುತ್ತಿತ್ತು. ಈ ವೇಳೆ ರೈತರು ಶಬ್ದ ಮಾಡಲಾದರೂ ಆನೆ ಜಮೀನಿನಿಂದ ತೆರಳಲಿಲ್ಲ. ಕೆಲ ಹೊತ್ತಿನ ಬಳಿಕ ಕಾಡಾನೆ ಅಲ್ಲಿಂದ ಅರಣ್ಯ ಪ್ರದೇಶದತ್ತ ತೆರಳಿತು. ಸ್ಥಳಕ್ಕೆ ತೆರಳಿ ನೋಡಲಾಗಿ ಅಪಾರ ಪ್ರಮಾಣದಲ್ಲಿ ಫಸಲನ್ನು ನಾಶಪಡಿಸಿತ್ತು. ಕಾಡಾನೆಯ ಹಾವಳಿಯ ದೃಶ್ಯವನ್ನು ರೈತರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ. ಬೆಳೆ ನಷ್ಟವಾಗಿರುವ ಬಗ್ಗೆ ರೈತ ಸಿದ್ದಶೆಟ್ಟಿ ಅವರು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net